ತಲೆಂಬಿಲ: ಯುವಕೇಸರಿ ಗೆಳೆಯರ ಬಳಗದ 12ನೇ ವಾರ್ಷಿಕೋತ್ಸವ

0


ಬಂಟ್ವಾಳ: ಅಮ್ಟಾಡಿ ತಲೆಂಬಿಲದ ಯುವಕೇಸರಿ ಗೆಳೆಯರ ಬಳಗ ಇದರ 12ನೇ ವಾರ್ಷಿಕೋತ್ಸವ ಸಮಾರಂಭ ಮನೆಜಾಲು ಎಂಬಲ್ಲಿ ನಡೆಯಿತು.


ಸಮಾರಂಭದಲ್ಲಿ ಪುದು ಶ್ರೀ ರಾಧಾಸುರಭಿ ಗೋಮಂದಿರದ ಶ್ರೀ ಭಕ್ತಿಭೂಷಣದಾಸ ಪ್ರಭೂ ಆಶೀರ್ವಚನ ನೀಡಿ, ಭಾರತದ ಸನಾತನ ಧರ್ಮ ಎಲ್ಲಾ ಧರ್ಮಗಳ ಮೂಲ. ಸನಾತನ ಧರ್ಮದ ರಕ್ಷಣೆಯಾದರೆ ವಿಶ್ವಕ್ಕೆ ಶಾಂತಿ ಸಾಧ್ಯ, ಇಂದು ನಮ್ಮ ಯುವಜನತೆ ಪಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸಿ ನಮ್ಮ ಧರ್ಮದ ಆಚರಣಾ ಪದ್ದತಿಯನ್ನು ಮರೆಯುತ್ತಿರುವುದು ವಿಷಾದನೀಯ, ಪರಿಣಾಮವಾಗಿ ಜೀವನದಲ್ಲಿ ಆತಂಕ, ಒತ್ತಡ, ದುಷ್ಟ ಚಟ, ಮೊಬೈಲ್ ಗೀಲಿಗೆ ಬಲಿಯಾಗುತ್ತಿದ್ದಾರೆ. ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಮಹಾಭಾರತ, ಭಾಗವತ ಪಾರಾಯಣ ಮಾಡಿಸಬೇಕು, ಸಂಸ್ಕೃತಿ, ಸಂಸ್ಕಾರ ಕಳಿಸಿ ಧರ್ಮದ ಹಾದಿಯಲ್ಲಿ ಸಾಗಲು ಕಲಿಸಬೇಕಿದೆ ಎಂದರು.

ಮುಖ್ಯ ಅತಿಥಿ ನಿವೃತ್ತ ಸೈನಿಕ ಪ್ರಕಾಶ್ ಸಿ. ಪೂಜಾರಿ ಹಾಗೂ ಸೇವಾ ಜಾಗರಣ ಪ್ರಮುಖ ಜಗದೀಶ್ ನೆತ್ತರಕೆರೆ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಪ್ರಕಾಶ್ ಸಿ. ಪೂಜಾರಿ ಹಾಗೂ ಉದ್ಯಮಿ ರಾಜೀವ ಕೈಕಂಬರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಸಂತೋಷ್ ಪಚ್ಚಿನಡ್ಕ, ಹರಿಯಪ್ಪ ಕುಲಾಲ್, ಹರೀಶ್ ತಲೆಂಬಿಲ ಉಪಸ್ಥಿತರಿದ್ದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here