ಅಕ್ಷರ ಜಾತ್ರೆಗೆ ವೈಭವದ ಸಾಂಸ್ಕೃತಿಕ ದಿಬ್ಬಣದ ಮೆರವಣಿಗೆ

0

ಬಂಟ್ವಾಳ: ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ, ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಸರ್ವಾಧ್ಯಕ್ಷತೆಯಲ್ಲಿ 2 ದಿನಗಳ ಕಾಲ ನಡೆಯಲಿರುವ ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂತ್ವಭಾವಿಯಾಗಿ ಆಕರ್ಷಕ ಮೆರವಣಿಗೆ ನಡೆಯಿತು.


ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಕನ್ನಡ ಬಾವುಟವನ್ನು ಹಸ್ತಾಂತರಿಸುವ ಮೂಲಕ ಕನ್ನಡ ಸಾಂಸ್ಕೃತಿಕ ದಿಬ್ಬಣವನ್ನು ಉದ್ಘಾಟಿಸಿದರು.


ಬಣ್ಣದ ಕೊಡೆಗಳು, ಕಲಶ ಹೊತ್ತ ಮಹಿಳೆಯರು, ಕೊಂಬು, ಚೆಂಡೆ, ಕೀಲು ಕುದರೆ, ಡೊಳ್ಳು ಕುಣಿತ, ಕುಣಿತ ಭಜನೆ, ಬೆಂಕಿ ಊದುವ ಮನುಷ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಸಾಂಸ್ಕೃತಿಕ ದಿಬ್ಬಣಕ್ಕೆ ವಿಶೇಷ ಮೆರುಗು ನೀಡಿತು. ಈ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸ್ವಾಗತ ಸಮಿತಿಯ ಪ್ರಮುಖರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಚಂದ್ರಹಾಸ್ ಶೆಟ್ಟಿ ರಾಮದಾಸ ಬಂಟ್ವಾಳ, ಸುಭಾಶ್ಚಂದ್ರ ಜೈನ್, ವಿಶ್ವನಾಥ ಬಂಟ್ವಾಳ, ಕೃಷ್ಣಕುಮಾರ್ ಪೂಂಜ, ಬೇಬಿ ಕುಂದರ್, ಅಬ್ಬಾಸ್ ಅಲಿ, ರಮಾನಂದ ನೂಜಿಪ್ಪಾಡಿ, ಗಣೇಶ್ ಪ್ರಸಾದ್ ಪಾಂಡೇಲು, ಪ್ರಭಾಕರ ಪ್ರಭು, ಸರಪಾಡಿ ಅಶೋಕ್ ಶೆಟ್ಟಿ, ನಾರಾಯಣ ಸಿ. ಪೆರ್ನೆ, ಸದಾಶಿವ ಬಂಗೇರ, ಮಚ್ಚೇಂದ್ರ ಸಾಲ್ಯಾನ್ , ಸುಕುಮಾರ್ ಬಂಟ್ವಾಳ, ದಾಮೋದರ್ ಏರ್ಯ, ಅಬೂಬಕ್ಕರ್ ಅಮ್ಮುಂಜೆ, ಎಚ್ಕೆ ನಯನಾಡು, ಉಮರ್ ಮಂಚಿ, ರವೀಂದ್ರ ಕುಕ್ಕಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ, ಯೋಜನಾಧಿಕಾರಿ ಜಯಾನಂದ ಪಿ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾ.27ರಂದು ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆದು, ವಿವಿಧ ಗೋಷ್ಟಿಗಳು, ಕೃತಿಗಳ ಲೋಕಾರ್ಪಣೆ, ಅಗಲಿದ ಗಣ್ಯರಿಗೆ ನುಡಿನಮನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತಲಿವೆ. ಮಾ.28 ರಂದು ಸಾಹಿತ್ಯ ಗೋಷ್ಠಿ, ವಿಶೇಷ ಉಪನ್ಯಾಸ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸನ್ಮಾನ ಸಮಾರಂಭ ಹಾಗೂ ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಸಿಂಗಾರಗೊಂಡ ನಗರ
ಜಿಲ್ಲಾಮಟ್ಟದ ಕನ್ನಡ ಅಕ್ಷರ ಜಾತ್ರೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ.ರೋಡು ಕನ್ನಡ ಭಾವುಟದ ಕೆಂಪು ಹಾಗೂ ಹಳದಿ ಬಣ್ಣದಿಂದ ಕಂಗೊಳಿಸುತ್ತಿದೆ.‌ ಬಿ.ಸಿ.ರೋಡು ಕೈಕಂಬದಿಂದ‌, ಸಮ್ಮೇಳನ ನಡೆಯುವ ಸಭಾಂಗಣದವರೆಗೆ ನಗರದ ಡಿವೈಡರ್ ಗಳಲ್ಲಿ, ಪ್ರಮುಖ ಸ್ಥಳಗಳಲ್ಲಿ, ರಿಕ್ಷಾ ಮೊದಲಾದ ವಾಹನಗಳಲ್ಲಿ ಕನ್ನಡ ಬಾವುಟ ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here