ಬಂಟ್ವಾಳ: ರಾಜ್ಯ ಸರಕಾರದ ಈ ಬಾರಿಯ ಬಜೆಟ್ ಮಂಡನೆಯನ್ನು ದೂರದೃಷ್ಟಿ ಇಲ್ಲದ, ಅನುಷ್ಠಾನಕ್ಕೆ ಅಸಾಧ್ಯವಾದ ಲೆಕ್ಕಚಾರವಿಲ್ಲದ ಘೋಷಣೆಯ ಬಜೆಟ್ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿಯಮಿತದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರತಿಕ್ರಿಯಿಸಿದ್ದಾರೆ.
ಮತ ಭೇಟೆಗಾಗಿ ಸೀಮಿತ ವರ್ಗದ ಓಲೈಕೆಗೆ ಉತ್ತೇಜನ, ಕರಾವಳಿ ಜನತೆಯ ಬಹುನಿರೀಕ್ಷೆಯ ಐಟಿ ಉದ್ದಿಮೆಗೆ ಕೊಕ್, ಅಸಂಬದ್ಧ ನಿಯಮ ಪ್ರಕಾರ ವಿಪರೀತ ತೆರಿಗೆ ಸಂಗ್ರಹದ ಗುರಿ, ಬೆಲೆ ಏರಿಕೆಯ ಮಧ್ಯೆ ಎಫ್.ಸಿ ನವೀಕರಣದ ನೆಪದಲ್ಲಿ ರಿಕ್ಷಾ ಚಾಲಕರ ಹೊಟ್ಟೆಗೆ ಪೆಟ್ಟು, ಗ್ಯಾರಂಟಿ ಯೋಜನೆ ಮುಂದುವರಿಕೆಗಾಗಿ ಹಲವರ ಲೂಟಿ ಮಾಡಿ ಕೆಲವರ ಮೂಗಿಗೆ ಬೆಲ್ಲ, ಕೃಷಿ, ತೋಟಗಾರಿಕೆಗಳಿಗೆ ವಿಶೇಷ ಯೋಜನೆ ಪ್ರಕಟ ಮಾಡಿಲ್ಲ. ಒಟ್ಟಿನಲ್ಲಿ ಮರುಪಾವತಿಗೆ ಸಾಧ್ಯವಾಗದ ಸಾಲದ ಸುಳಿಯಲ್ಲಿ ರಾಜ್ಯ ಸರಕಾರದ ಈ ಬಾರಿಯ ಬಜೆಟ್ ಎಂದು ಪ್ರತಿಕ್ರಿಯಿಸಿದ್ದಾರೆ.








