ಬಂಟ್ವಾಳ: ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕಿನ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕುಗ್ರಾಮಗಳ ಬಡಜನರಿಗೆ ಬ್ಯಾಂಕ್ ವ್ಯವಹಾರವನ್ನು ತಲುಪಿಸಲು ಬ್ಯಾಂಕುಗಳ ಸೇವಾಪ್ರತಿನಿಧಿಯಾಗಿ ಸ್ವಸಹಾಯ ಸಂಘಗಳನ್ನು ರಚಿಸುತ್ತಿದೆ. ಈ ಕಾರ್ಯಕ್ರಮದನ್ವಯ ಸದಸ್ಯರು ತಮ್ಮ ಹಣಕಾಸಿನ ನಿರ್ವಹಣೆಯನ್ನು ತಮ್ಮ ಗ್ರಾಮಗಳಲ್ಲಿ ಯೋಜನೆಯ ಸಹಕಾರದೊಂದಿಗೆ ಮಾಡಿಕೊಳ್ಳುತ್ತಾರೆ. ಯೋಜನೆಯು ಈ ಸದಸ್ಯರ ಹಣವನ್ನು ಬ್ಯಾಂಕಿಗೆ ಮುಟ್ಟಿಸುವುದಲ್ಲದೇ ಬ್ಯಾಂಕುಗಳು ನೀಡುವ ಸಾಲವನ್ನು ಸದಸ್ಯರಿಗೆ ಮುಟ್ಟಿಸುತ್ತದೆ. ಈ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಛೇರಿ ಮುಂಬಯಿ ಯ ಡಿಜಿಎಂ ಪಳನಿ ಸ್ವಾಮಿ, ಬೆಂಗಳೂರು ಎಲ್ ಎಚ್ ಒ ಚೀಫ್ ಮ್ಯಾನೇಜರ್ ಶೋಭಾ, ಮಂಗಳೂರು ಎಸ್ ಬಿ ಐ ಆರ್ ಎ ಸಿಸಿ ಇದರ ಚೀಫ್ ಮ್ಯಾನೇಜರ್ ರಾಜೇಶ್, ಅಧಿಕಾರಿಗಳಾದ ಮುದ್ರಾಲೋಪ, ಸ್ವಾತಿ ರವರು ಬಂಟ್ವಾಳ ತಾಲೂಕು ವ್ಯಾಪ್ತಿಯ ಅಲ್ಲಿಪಾದೆ ಸಿ.ಎಸ್.ಸಿ. ಕೇಂದ್ರ, ನಾವೂರದ ಶ್ರಾವಣ ಸಂಘದ ದಾಖಲಾತಿ ಪರಿಶೀಲನೆ ಹಾಗೂ ವಾರದ ಸಭೆ ಭೇಟಿ ಮತ್ತು ಪೂಪಾಡಿಕಟ್ಟೆಯಲ್ಲಿ ಜನನಿ ಸಂಘದ ಸದಸ್ಯರ ಸ್ವ ಉದ್ಯೋಗ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದರು.

ಯೋಜನೆಯ ಮೂಲಕ ಸಂಘಗಳ ನಿರ್ವಹಣೆ, ವಾರದ ಸಭೆಯಲ್ಲಿ ಪಾಲ್ಗೊಳ್ಳುವಿಕೆ ದಾಖಲಾತಿಗಳ ನಿರ್ವಹಣೆ ಮತ್ತು ಹಣಕಾಸಿನ ವ್ಯವಹಾರಗಳ ಪ್ರಸ್ಮಿತ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಛೇರಿ ಬಿ.ಸಿ. ವಿಭಾಗದ ನಿರ್ದೇಶಕ ಪ್ರವೀಣ್. ಎಂ.ಸಿ. ಯೋಜನಾಧಿಕಾರಿಯಾದ ಜಗದೀಶ್ ಕುಮಾರ್, ಉಡುಪಿ ಪ್ರಾದೇಶಿಕ ವಿಭಾಗದ ಬಿ.ಸಿ. ಯೋಜನಾಧಿಕಾರಿಗಳಾದ ಸುಪ್ರೀತ್ ಕುಮಾರ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪೂಜಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ್ ಎಸ್.ಹೆಚ್. ಮತ್ತು ಬಂಟ್ವಾಳ ವಲಯ ಮೇಲ್ವಿಚಾರಕ ರಾಜೇಶ್ ನಾಯ್ಕ ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.








