ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಬಂಟ್ವಾಳ ಹಾಗೂ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ 5 ದಿನಗಳ ಕಾಲ ಉಚಿತವಾಗಿ ಸೀರೆ ಗೊಂಡೆ ಮತ್ತು ಸೀರೆ ಫೋಲ್ಡಿಂಗ್ ತರಬೇತಿ ಕಾರ್ಯಗಾರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನಿರ್ದೇಶಕ ಡಿ. ದಿನೇಶ್ ಪೂಜಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದು ಸಮಾಜದಲ್ಲಿ ಅದೆಷ್ಟೋ ಕುಟುಂಬ ಸ್ವಾವಲಂಬಿ ಜೀವನ ನಡೆಸಲು ಸ್ಫೂರ್ತಿದಾಯಕವಾಗಿದೆ. 5 ದಿನದಲ್ಲಿ ಸಿಗುವ ತರಬೇತಿ ಪ್ರಯೋಜನವನ್ನು ಉತ್ತಮವಾಗಿ ಪಡೆದುಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕಿ ಧರಣಿ, ಯೋಜನಾಧಿಕಾರಿ ಜಯಾನಂದ ಪಿ, ತರಬೇತಿ ಶಿಕ್ಷಕಿ ವಿಜಯ, ಕೋಣಾಜೆ ಒಕ್ಕೂಟದ ವಲಯ ಅಧ್ಯಕ್ಷ ರವಿ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಉಷಾ ಸಹಕರಿಸಿದರು








