ಎ.15 ರಂದು ನಾಮಪತ್ರ ಸಲ್ಲಿಕೆ-ಪತ್ರಿಕಾಗೋಷ್ಟಿಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

0

ವಿಟ್ಲ:ಕಳೆದ ಭಾರಿ ಪಕ್ಷದ ವರಿಷ್ಟರು, ಪ್ರಮುಖರು ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ನನಗೆ ಅವಕಾಶ ಮಾಡಿ ಕೊಟ್ಟಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದೆ. ಈ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಸಂಘರ್ಷ ರಹಿತ ಶಾಂತಿಯ ನವ ಬಂಟ್ವಾಳ ಕಟ್ಟುವಲ್ಲಿ ಸಾಧ್ಯವಾಗಿರುವುದು ನನಗೆ ಆತ್ಮತೃಪ್ತಿ ಇದೆ. ನನ್ನ ಅವಧಿಯಲ್ಲಿ ರಸ್ತೆ ಸಹಿತ ಜನರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದೇನೆ ಎಂದು ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು.

ಅವರು ಎ.12ರಂದು ಬಿಸಿರೋಡ್ ನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎ.15 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಪಾದಯಾತ್ರೆಯ ಮೂಲಕ ಬಿಸಿರೋಡು ವರೆಗೆ ಅಪಾರ ಬೆಂಬಲಿಗ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಸಲಿದ್ದೇನೆ. ಬೆಳಿಗ್ಗೆ 8 ಗಂಟೆಗೆ ದೇವಿಗೆ ಪೂಜೆ ಸಲ್ಲಿಸಿ ಬಳಿಕ 8.30 ಕ್ಕೆ ಕಾರ್ಯಕರ್ತರ ಜೊತೆ ಹೊರಡಲಿದ್ದೇವೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದು , ಪಕ್ಷದ ಸೂಚನೆಯಂತೆ ಅಭ್ಯರ್ಥಿಯಾಗಿ ಆಯ್ಕೆ ನಡೆದಿದೆ ‌ಎಂದರು. ಕ್ಷೇತ್ರದ ಜನರಿಗೆ ಶಾಂತಿ ನೆಮ್ಮದಿಯ ಸಮೃದ್ದಿಯ ಬಂಟ್ವಾಳ ಬೇಕಾಗಿದೆ, ಹಾಗಾಗಿ ಕೇಂದ್ರ ,ರಾಜ್ಯದ ಯೋಜನೆಗಳು ಮತ್ತು ಅಭಿವೃದ್ಧಿ ಜೊತೆಗೆ ಶಾಂತಿಯ ಬಂಟ್ವಾಳವನ್ನು ಉಳಿಸಿಕೊಳ್ಳಲು ಮತ್ತೆ ಬಿಜೆಪಿಗೆ ಬೆಂಬಲ ನೀಡುತ್ತಾರೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.

ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿರವರು ಮಾತನಾಡಿ, ಕಳೆದ ಐದು ವರ್ಷಗಳಲ್ಲಿ 59 ಗ್ರಾಮ ಪಂಚಾಯತ್ ಗಳಿಗೂ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಕ್ಷೇತ್ರದ ಮತದಾರರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ರಾಜೇಶ್ ನಾಯ್ಕ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಲಿದ್ದೇವೆ..
2023 ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುವುದು ನಿಶ್ಚಿತ, ಆದರೆ 30 ಸಾವಿರ ಅಂತರಗಳಿಂದ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಯೋಚನೆಯಾಗಿದೆ ಎಂದರು.

ಬಿಜೆಪಿ‌ ಕ್ಷೇತ್ರ ಉಸ್ತುವಾರಿ ರವಿಶಂಕರ್ ಮಿಜಾರ್, ಪ್ರಧಾನ‌ ಕಾರ್ಯದರ್ಶಿ ಡೊಂಬಯ್ಯ ಅರಳ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here