ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ

0

ಬಂಟ್ವಾಳದ ಅಭಿವೃದ್ಧಿಯ ಜೊತೆ ಶಾಂತಿಯುತ ಬಂಟ್ವಾಳವಾಗಿ ಮಾರ್ಪಾಡು ಮಾಡಲು ತಾಲೂಕಿನ ಜನರು ಹಾಗೂ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಯಿತು
ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.

ಅವರು ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆನೈತ್ತೊಢಿ, ಪಿಲಿಮೊಗರು, ಕೊಡಂಬೆಟ್ಟು ಹಾಗೂ ಅಜ್ಜಿಬೆಟ್ಟು ಗ್ರಾಮದಲ್ಲಿ ಸುಮಾರು 16 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.


ಕರ್ತವ್ಯದ ಒಂದು ಭಾಗವೆಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಜನಪರವಾದ ಕಾರ್ಯಗಳನ್ನು ಮಾಡಬೇಕು ಎಂಬ ಮನಸ್ಥಿತಿ ಇದ್ದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ಕೋವಿಡ್ ಬಳಿಕ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ. ವಾಮದಪದವು ಆಸ್ಪತ್ರೆಯಲ್ಲಿ ಪ್ರಥಮವಾಗಿ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಬೂಡ ಅಧ್ಯಕ್ಷ ದೇವದಾಸ್ ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಅವರು ಕಳೆದ 4 ವರ್ಷ 8 ತಿಂಗಳಿನಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಚೆನ್ನೈತ್ತೋಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಹುತೇಕ ಎಲ್ಲಾ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯ ಒಳಚರಂಡಿ ಹಾಗೂ ನಗರ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ , ಗ್ರಾ.ಪಂ‌.ಸದಸ್ಯರಾದ ವಾಸು ,ವಿನೋದ್ ಕೊಪ್ಪಳ, ಅಣ್ಣಿ ಪೂಜಾರಿ, ಕುಸುಮಾ ರಮೇಶ್ ಶೆಟ್ಟಿ, ಮುತ್ತಮ್ಮ, ರವಿ ರಾಮ ಶೆಟ್ಟಿ, ಸುನಂದಾಸುರೇಂದ್ರ, ಪ್ರಮುಖರಾದ ಗೋಪಾಲ ಕೃಷ್ಣ ಚೌಟ, ಪುರುಷೋತ್ತಮ ಶೆಟ್ಟಿ ವಾಮದಪದವು, ವಿಜಯ ರೈ, ದಿನೇಶ್ ಶೆಟ್ಟಿ ದಂಬೆದಾರ್, ಚಂದ್ರಶೇಖರ ಶೆಟ್ಟಿ, ಶ್ಯಾಮಪ್ರಸಾದ್ ಪೂಂಜ ಬಾಳಿಕೆ, ಮೋಹನ್ ದಾಸ್ ಗಟ್ಟಿ, ದಿವಾಕರ ಪೂಜಾರಿ, ನವೀನ್ ಪೂಜಾರಿ, ಸುರೇಶ್ ನಾಯಕ್, ಚೇತನ್ ಕುದ್ಕೋಡಿ, ನಾರಾಯಣ ಪೂಜಾರಿ, ನಾಗೇಶ್ ಶೆಟ್ಟಿ, ಗಂಗಾದರ ಪೂಜಾರಿ ಕೊಡಂಬೆಟ್ಟು, ವಿನೋದ್ ಪೂಜಾರಿ, ಕುಸಮಾವತಿ,ವೆಂಕಟೇಶ ಭಟ್, ರಾಧಕೃಷ್ಣ ಭಟ್,ಪ್ರಣೀತ್ , ಮುದ್ದು ಪೂಜಾರಿ, ಹಂಸರಾಜ್ ಜೈನ್, ದೇವಿಪ್ರಸಾದ್ ಶೆಟ್ಟಿ, ನವೀನ್ ಪೂಜಾರಿ ಕೊಡಂಬೆಟ್ಟು, ರೂಪೇಶ್ ಪೂಜಾರಿ, ಉಮೇಶ್ ಶೆಟ್ಟಿ ಭಂಡಾರಿ ಬೆಟ್ಟು, ಪ್ರಭಾಕರ್ ಶೆಟ್ಟಿ, ಗಣನಾಥ ಶೆಟ್ಟಿ, ಶ್ರೀಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here