ಬಂಟ್ವಾಳ : ಬಂಟ್ವಾಳ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆಯು ಬಂಟ್ವಾಳ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಮಾ.17ರಂದು ಪೂರ್ವಾಹ್ನ 11.00ಗಂಟೆಗೆ ಬಂಟ್ವಾಳ ತಾಲೂಕು ಪಂಚಾಯತ್ನ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ನಡೆಯಲಿದೆ.
ಪರಿಶಿಷ್ಟ ಜಾತಿ/ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ಎಲ್ಲಾ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಮತ್ತು ಪರಿಶಿಷ್ಟ ಜಾತಿ ಮತು ಪ.ವರ್ಗದ ಸಮುದಾಯದ ಮುಖಂಡರು ತಮ್ಮ ಸಲಹೆ ಸೂಚನೆಯನ್ನು ಮತ್ತು ಅವಹಾಲುಗಳನ್ನು ಸಹಾಯಕ ನಿರ್ದೇಶಕರವರ ಕಚೇರಿ(ಗ್ರೇಡ್-೨) ಸಮಾಜ ಕಲ್ಯಾಣ ಇಲಾಖೆ, ಬಿ ಸಿ ರೋಡ್,ಬಂಟ್ವಾಳ ತಾಲೂಕು, ಇವರಿಗೆ ಮುಂಚಿತವಾಗಿ ನೀಡುವಂತೆ ಪ್ರಕಟನೆ ತಿಳಿಸಿದೆ