ಬಂಟ್ವಾಳ : ಶಿವಶಕ್ತಿ ಬ್ರದರ್ಸ್ ನಿಟಿಲಾಪುರ ಟ್ರಸ್ಟ್ ಹಾಗೂ ಊರ ಪರವೂರ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಶ್ರೀ ನಿಟಿಲಾಕ್ಷ ಸದಾಶಿವ ಮಹಾದ್ವಾರದ ಲೋಕಾರ್ಪಣಾ ಕಾರ್ಯಕ್ರಮವು ಮಾ.14ರಂದು ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಮಹಾದ್ವಾರವನ್ನು ದೀಪ ಬೆಳಗಸಿ ಹಾಗೂ ತೆಂಗಿನಕಾಯಿ ಒಡೆಯುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು .
ಸರಿಯಾಗಿ 24 ವರ್ಷಗಳ ಹಿಂದೆ(14-03-1999) ಉದ್ಘಾಟನೆ ಯಾಗಿದ್ದ ಹಿಂದಿನ ಮಹಾದ್ವಾರ ಇದಾಗಿದ್ದು ಶಿವಶಕ್ತಿ ಬ್ರದರ್ಸ್ ನೇತೃತ್ವದಲ್ಲಿ ಇದೀಗ ಸಂಘಟನೆಗೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹಳೆ ದ್ವಾರವನ್ನು ಕೆಡವಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಹೊಸ ದ್ವಾರವನ್ನು ನಿರ್ಮಿಸಲಾಗಿದೆ.ನಂತರ ನಿಟಿಲಾಪುರ ದೇವಾಲಯದ ಬಳಿ ಶಿವಶಕ್ತಿ ಬ್ರದರ್ಸ್ ನಿಟಿಲಾಪುರ ಟ್ರಸ್ಟ್ ಹಾಗೂ ಊರ ಭಕ್ತಾದಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ ಕಾಣಿಕೆಹುಂಡಿಯನ್ನೂ ದೇವಳಕ್ಕೆ ಸಮರ್ಪಿಸಲಾಯಿತು.
ಶಾಸಕರ ಅನುದಾನದಲ್ಲಿ ನೆಟ್ಲ ದ್ವಾರದಿಂದ ನಿಟಿಲಾಪುರ ದೇವಾಲಯದವರೆಗೆ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆಯನ್ನೂ ಸಾಂಕೇತಿಕವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಕಾರ್ಯಕಾರಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗನ್ನಾಥ ಕುಲಾಲ್ ಹಾಗೂ ಮೋನಪ್ಪ ದೇವಸ್ಯ ಶಿವಶಕ್ತಿ ಬ್ರದರ್ಸ್ ಇದರ ಅಧ್ಯಕ್ಷ ಮನೋಜ್ ಗಟ್ಟಿ ನೆಟ್ಲಾ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.