ಬೆಳ್ಳಾರೆ:ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ “ಪ್ರವೀಣ್ ನೆಟ್ಟಾರು ಹತ್ಯೆ ಖಂಡನೀಯ,ದೆಹಲಿಯಲ್ಲಿ ಅಧಿವೇಶನದಲ್ಲಿ ಇದ್ದ ಕಾರಣ ನಿನ್ನೆ ರಾತ್ರಿ ಬೆಂಗಳೂರಿಗೆ ಬಂದು ಇಂದು ಪ್ರವೀಣ್ ಮನೆಗೆ ಬಂದು ಭೇಟಿ ನೀಡಿದ್ದೇವೆ.
ನಮ್ಮದೇ ಸರ್ಕಾರ ಇದ್ರು ಆದರೂ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣ ಕಾನೂನು ತೆಗೆದುಕೊಳ್ಳುವುದಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂಬ ಆರೋಪ ಎಲ್ಲರಲ್ಲೂ ಇದೆ.ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ,ಲೋಕಸಭಾ ಸದಸ್ಯನಾಗಿ ಕೊಲೆ ಪ್ರಕರಣಗಳ ಆಧಾರಿತವಾಗಿ ಅದು ನಡೆಯಬಾರದು ಎಂಬ ರೀತಿಯಲ್ಲಿ ಕ್ರಮ ಕೈಗೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂಬುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.ಸುಳ್ಯದ ಪರಿಸರದಲ್ಲೇ ನಾಲ್ಕೈದು ದಿನದ ಹಿಂದೆ ನಡೆದ ವಿದ್ಯಾಮಾನ ಇರಬಹುದು.ಹಿಜಾಬ್ ಪ್ರಕರಣದ ಬಳಿಕದ ಪ್ರಕ್ಷಬ್ದ ವಾತಾವರಣವನ್ನು ಹತೋಟೊ ಮಾಡಲು ವಿಶೇಷ ಕಾರ್ಯಪಡೆ ರಚಿಸಿ,ರಾಜ್ಯಾದ್ಯಂತ ನಾವು ಕಟ್ಟೆಚ್ಚರ ವಹಿಸಿಕೊಳ್ಳಬೇಕಿತ್ತು.ಪೊಲೀಸ್ ಇಲಾಖೆ ಕೂಡ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಾಯ್ತು.ಇತ್ತೀಚಿನ ದಿನದಲ್ಲಿ ಪೊಲೀಸರೆಂದರೆ ಭಯ ಇಲ್ಲದ ವಾತಾವರಣ ಸೃಷ್ಠಿಯಾಗಿದೆ.ಪೊಲೀಸರನ್ನು ಸುಧಾರಿಸಬಹುದೆಂಬ ಭಾವನೆ ಬಂದಿರುವುದು ದುರ್ದೈವ.ಈ ಘಟನೆ ನನಗೆ ತುಂಬಾ ನೋವು ತಂದಿದೆ.ಪ್ರಾಮಾಣಿಕ ಕಾರ್ಯಕರ್ತ ತನ್ನ ವ್ಯವಸ್ಥೆಗಳನ್ನು ತಾನೇ ನೋಡಿಕೊಂಡು.ಸಾಮಾಜಿಕವಾಗಿ ತನ್ನನ್ನು ಜೋಡಿಸಿಕೊಳ್ಳುವ ಓರ್ವ ವ್ಯಕ್ತಿ.ಅವನ ದಿಢೀರ್ ಅತ್ಯೆಯಿಂದ ಬೇಸರವಾಗಿದೆ.ಇಲ್ಲಿ ಬಂದಾಗ ಆತನ ಪತ್ನಿ ಪ್ರವೀಣ್ ಗೆ ಬೆದರಿಕೆ ಇದ್ರು ಪೊಲೀಸರಿಗೆ ತಿಳಿಸಿದ್ರು ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ರು.ಹೀಗಿದ್ರೆ ಇದು ಒಂದು ಗಂಭೀರ ಪ್ರಶ್ನೆ,ಪ್ರತಿಯೊಬ್ಬರಿಗೂ ಬೆದರಿಕೆ ಬಂದಾಗ ಪೊಲೀಸರಿಗೆ ಅವರ ಹಿಂದೆ ನಿಲ್ಲುವುದು ಅಸಾಧ್ಯ,ಸಮಾಜದಲ್ಲಿ ಈ ರೀತಿ ಬೆದರಿಸುವವರಿಗೆ ಭಯ ಬೇಕು ನಾವು ಏನಾದ್ರು ಮಾಡಿದರೆ ಸರ್ಕಾರ,ಪೊಲೀಸರು ನಮ್ಮನ್ನು ಬಿಡುವುದಿಲ್ಲವೆಂಬ ಭಯ ಬೇಕು.ಆದ್ದರಿಂದ ಈ ಕೆಲಸ ಕಾರ್ಯ ಮಾಡಲು ಸಾಧ್ಯವಿಲ್ಲ ಅನ್ನುವ ಭಾವನೆ ಹುಟ್ಟುವಂತೆ ಮಾಡುವ ಅವಶ್ಯಕತೆ ಇದೆ.ನಾನು ಮುಖ್ಯಮಂತ್ರಿ ಯೊಡನೆ ಮಾತನಾಡಿ ಸಾಮಾಜಿಕ ಜಾಲತಾಣದ ಮೂಲಕ ಬೇರೆ-ಬೇರೆ ಚಿಚಾರಗಳ ಬಗ್ಗೆ ತಿಳಿಸಿದ್ದೇನೆ.ಇಂತಹ ಘಟನೆಗಳನ್ನು ಎನ್.ಐ.ಎ ಗೆ ಕೊಡುವ ಬಗ್ಗೆ ಒತ್ತಡವಿತ್ತು.ಅವರಿಗೆ ನೀಡಿದ ಅನೇಕ ಪ್ರಕರಣಗಳೂ ಇನ್ನೂ ತನಿಖೆಯಲ್ಲಿದೆ ಎಂಬ ಅಂಶ ಗಮನದಲ್ಲಿದ್ದರೂ ಕೂಡ.ಅವರು ನೇರವಾಗಿ ಕಾರ್ಯಾಚರಿಸುತ್ತಾರೆನ್ನುವ ಕಾರಣಕ್ಕೆ ಅವರಿಗೆ ಇದನ್ನು ಮುಖ್ಯಮಂತ್ರಿ ನೀಡಿದ್ದಾರೆ.ಬಿ.ಜೆ.ಪಿ ಎಂಪಿಗಳು ದೆಹಲಿಯಲ್ಲಿ ಸೇರಿಕೊಂಡು ಅದನ್ನು ಎನ್.ಐ.ಎಗೆ ಹಸ್ತಾಂತರಿಸಬೇಕೆಂದಾಗ ನಾವು ಗೃಹ ಮಂತ್ರಿಗಳನ್ನು ಭೇಟಿಯಾಗಿ ಅವರ ಮುಖಾಂತರ ಒತ್ತಾಯಿಸುವುದೆಂದು ನಿಶ್ಚಯ ಮಾಡಿದ್ದೇವೆ,ಸೋಮಾವಾರ ಅಥವಾ ಮಂಗಳವಾರ ಈ ಕಾರ್ಯ ಮಾಡಬೇಕೆನ್ನುವುದು ನಮ್ಮ ಮನಸ್ಸಲ್ಲಿದೆ ಅತ್ಯಂತ ವೇಗವಾಗಿ ಆರೋಪಿಗಳ ಪತ್ತೆಯಾಗಬೇಕು.ಅವರ ಮನೆಯವರು ಎಲ್ಲಾ ಆದ ಮೇಲೆ ಬಂದು ಕ್ರಮ ಕೈಗೊಳ್ಳುತ್ತೆವೆ ಎನ್ನುವುದಕ್ಕಿಂತ ಹೀಗಾಗುವ ಮೊದಲೇ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಉತ್ತರಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ.ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ”ಎಂದರು.