ಬಂಟ್ವಾಳ :ಮೂರ್ಚೆ ರೋಗ ಭಾದಿಸಿದ ಚಾಲಕ ಚಲಾಯಿಸುತ್ತಿದ್ದ ಲಾರಿ ರಸ್ತೆ ಬದಿ ನಿಲ್ಲಿಸಿದ ವಾಹನಗಳಿಗೆ ಡಿಕ್ಕಿ ಹೊಡೆದು ಪೆಟ್ರೋಲ್ ಬಂಕ್ ವೊಂದಕ್ಕೆ ನುಗ್ಗಿದ ಘಟನೆ ಬಿ ಸಿ ರೋಡ್ ನಲ್ಲಿ ನಡೆದಿದೆ.ಮಂಗಳೂರು ಕಡೆಯಿಂದ ಹಾಸನ ಕಡೆ ಹೋಗುತ್ತಿದ್ದ ಖಾಲಿ ಲಾರಿ ಚಾಲಕನಿಗೆ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಂತೆ ಮೂರ್ಚೆ ರೋಗ ಬಾಧಿಸಿ ಈ ಘಟನೆ ನಡೆದಿದ್ದು ಯಾರಿಗೂ ಪ್ರಾಣಪಾಯ ಸಂಭವಿಸಿಲ್ಲ.
ಲಾರಿ ಚಾಲಕ ಲಕ್ಷ್ಮಣ್ ಎಂಬಾತನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಲಾರಿ ಪೆಟ್ರೋಲ್ ಬಂಕ್ ಬಳಿ ಕಾರು, ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿದ್ದ ನ್ಯಾನೋ ಕಾರಿಗೆ ಡಿಕ್ಕಿಹೊಡೆದಿತ್ತು.