ಕಲ್ಲಡ್ಕ : ವಿದ್ಯಾಭಾರತಿ ಕರ್ನಾಟಕ ಹಾಗೂ ಮೈತ್ರೇಯಿ ಗುರುಕುಲ ಮೂರುಕಜೆ ಇದರ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ “ಭಾರತೀಯ ಜ್ಞಾನ ಪರಂಪರೆ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಹಿಂದೂ ಸೇವಾ ಪ್ರತಿಷ್ಠಾನದ ಪೂರ್ಣಾವಧಿ ಕಾರ್ಯಕರ್ತೆ ಹಾಗೂ ಮೂರುಕಜೆ ಗುರುಕುಲದ ಶಿಕ್ಷಕಿ ರಾಜೇಶ್ವರಿ ಭಟ್ ಮಾತನಾಡಿ “ಭಾರತೀಯ ಜ್ಞಾನ ಪರಂಪರೆ ಒಂದು ಸಮುದ್ರದಂತೆ ಅಗಾಧವಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನ ಪ್ರತಿಯೊಬ್ಬ ಪ್ರಜೆಗೂ ಅಗತ್ಯವಾಗಿದೆ” ಎಂದು ಹೇಳಿದರು.
ಶಿಕ್ಷಕಿ ಸಿಂಚನ ಮತ್ತು ವಿದ್ಯಾರ್ಥಿನಿ ಶೈಲಶ್ರೀ ಇವರು 8ನೇ ತರಗತಿಯ ವಿದ್ಯಾರ್ಥಿಗಳ ಪೋಷಕರಿಗೆ ಭಾರತೀಯ ಜ್ಞಾನ ಪರಂಪರೆಯ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಗಾಯತ್ರಿ ಸ್ವಾಗತಿಸಿ, ಶಿಕ್ಷಕರಾದ ಜಿನ್ನಪ್ಪ ವಂದಿಸಿದರು.