ವಿಟ್ಲ: ಧರ್ಮ ಶಿಕ್ಷಣದಿಂದ ವಂಚಿತರಾಗಿರುವ ಇಂದಿನ ಮಕ್ಕಳಿಗೆ ಧರ್ಮಶಿಕ್ಷಣ ನೀಡುವ ಅಗತ್ಯವಿದೆ. ಬಿಲ್ಲವರು ಭಿನ್ನಾಭಪ್ರಾಯ ಬದಿಗಿಟ್ಟು ಸಂಘರ್ಷವಿಲ್ಲದೆ ಒಟ್ಟಾಗಿರಬೇಕು ಎಂದು ಕಣಿಯೂರು ಚಾಮುಂಡೇಶ್ವರಿ ದೇವಿ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ ಕರೆ ನೀಡಿದರು,
ಕುಂಡಡ್ಕದ ಗುರುನಗರ ಎಂಬಲ್ಲಿ ನಿರ್ಮಿಸಲಾದ ನೂತನ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಉದ್ಘಾಟನೆ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಸಮಾಜ ಕಟ್ಟುವಾಗ ಯಾವುದೇ ಯೋಜನೆಯನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಲು ಸಾಧ್ಯವಿಲ್ಲ. ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ ಎಂದರು.
ಕುಂಡಡ್ಕ ಬಿಲ್ಲವ ಸಂಘದ ಅಧ್ಯಕ್ಷ ದೂಮಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ದೈವ ನರ್ಥಕ ರಾಮಣ್ಣ ಕುಳ, ಸಭಾಭವನಕ್ಕೆ ಸ್ಥಳ ದಾನ ಮಾಡಿದ ಸಂಜೀವ ಪೂಜಾರಿ ದಂಪತಿಗಳನ್ನು, ಕಟ್ಟಡ ಸಮಿತಿಯ ಸಂಚಾಲಕ ಯತೀಶ್ ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ ಡಾ| ಗೀತಪ್ರಕಾಶ್ ಎ,, ಡಾಕ್ಟರ್ ರಾಜಾರಾಮ್ ಕೆ ಬಿ ,ರಾಧಾಕೃಷ್ಣ ಪೈ, ವಿಟ್ಲ, ಕೆ. ಸಂಜೀವ ಪೂಜಾರಿ, ಶ್ರೀ ಚನ್ನಪ್ಪ ಗೌಡ , ಸಚಿನ್ ಕುಮಾರ್ , ಲೋಕೇಶ್ ತಂತ್ರಿಗಳು,ಸಂಜೀವ ಪೂಜಾರಿ ನಿಡ್ಯ, ಕೃಷ್ಣ ಎಂ ಪೂಜಾರಿ, ಸಂತೋಷ್ ಜೀವನ್, ಜಗದೀಶ್ ನಿಂಬಾಳ್ಕರ್, ಸರಿತಾ , ಪ್ರಮೀಳ ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕೌಶಿಕ್ ಭವಿಷ್ಯ ಪ್ರಾರ್ಥಿಸಿ, ನಾರಾಯಣ ಪೂಜಾರಿ ಎಸ್. ಕೆ. ಗೌರವಾಧ್ಯಕ್ಷರು, ಬಿಲ್ಲದ ಸಂಘ ಕುಂಡಡ್ಕ, ಸಂಘದ ಪ್ರಾಸ್ತಾವಿಕ ವರದಿಯನ್ನು ಯಾಚಿಸಿದರು, ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ವಿಠಲ ಪೂಜಾರಿ ಕುಂಡಡ್ಕ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ಕೆ ಟಿ ಆನಂದ ಧನ್ಯವಾದವಿತರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು .