ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಪ್ರಗತಿಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಪ್ರಗತಿಬಂದು ತಂಡಗಳಿಗೆ ಕೃಷಿ ಸಲಕರಣೆ ವಿತರಣೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶ ಜ. 31ರಂದು ಚಂದಳಿಕೆಯ ಭಾರತ್ ಆಡಿಟೋರಿಯಂ ನಲ್ಲಿ ಪ್ರಗತಿಬಂದು ಸ್ವ- ಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ ಇದರ ಅಧ್ಯಕ್ಷ ನವೀನ್ ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ದಾಮ ಮಾಣಿಲದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮ ಅಭಿವೃದ್ಧಿ ಯೋಜನೆಯ ಮೂಲಕ ಸ್ವಾವಲಂಬಿ ಜೀವನ ನಡೆಸಿ ಸಾರ್ಥಕತೆಯ ಬದುಕು ಕಟ್ಟಲು ಸಾಧ್ಯವಾಗಿದೆ , ಗ್ರಾಮ ಅಭಿವೃದ್ಧಿ ಯೋಜನೆ ಎನ್ನುವುದು ಜಾತಿ ಮೀರಿ ಬೆಳೆದ ಸಂಘಟನೆ ಆಗಿದೆ ಎಂದು ಹೇಳಿದರು.
ಪುತ್ತೂರು ವಿಧಾನ ಸಭಾ ಕ್ಷೆತ್ರದ ಶಾಸಕರಾದ ಸಂಜೀವ ಮಠ0ದೂರು ಕೃಷಿ ಸಲಕರಣೆಗಳನ್ನು ವಿತರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ದೂರ ದೃಷ್ಟಿಯ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಗಳು ಧರ್ಮಾಧಿಕಾರಿಗಳು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಇನ್ನಷ್ಟು ಬಲಿಷ್ಠವಾಗಲು ಸಹಕಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ನ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ನಾವು ಯಾವುದೇ ಕೆಲಸದಲ್ಲಿ ಇದ್ದರೂ ನಮ್ಮ ಮೂಲ ಕಸುಬು ಕೃಷಿಯನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉತ್ತಮ ಪ್ರಗತಿ ಬಂದು ತಂಡಗಳನ್ನು, ಉತ್ತಮ ಜ್ಞಾನ ವಿಕಾಸ ತಂಡಗಳನ್ನು, ಯೋಜನೆಯ ಮೂಲಕ ಸಹಾಯ ಪಡೆದು ಪ್ರಗತಿ ಸಾಧಿಸಿದ ಉತ್ತಮ ಕೃಷಿಕರನ್ನು, ಉತ್ತಮ ಸ್ವ ಉದ್ಯಮಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ಧರ್ಮಸ್ಥಳ ಇದರ ಕೃಷಿ ನಿರ್ದೇಶಕ ಮನೋಜ್ ಮೆನೇಜಸ್, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬಂಟ್ವಾಳ ತಾಲ್ಲೂಕು ಅಧ್ಯಕ್ಷರಾದ ರೋನಾಲ್ಡ್ ಡಿಸೋಜ, ಜನಜಾಗ್ರತಿ ವೇದಿಕೆ ವಿಟ್ಲ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್, ಇಕೋ ಗ್ಲಾಸ್ ಕಂಪನಿ ಮಾಲಕ ರಾಜಾರಾಮ್ ಸಿ ಜಿ, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬಂಟ್ವಾಳ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಆಳ್ವಾ ಕೊಡಾಜೆ, ಭಾರತ್ ಅಡಿಟೋರಿಯಂ ಮಾಲಕ ಸಂಜೀವ ಪೂಜಾರಿ, ಯೋಜನೆಯ ವಿಟ್ಲ ತಾಲೂಕಿಗೆ ಸಂಬಂಧಪಟ್ಟ ವಲಯ ಜನಜಾಗ್ರತಿ ವೇದಿಕೆಯ ಅಧ್ಯಕ್ಷರುಗಳಾದ ರಾಜರಾಮ ಶೆಟ್ಟಿ, ರಘುರಾಮ ಶೆಟ್ಟಿ, ರೋಹಿತಾಕ್ಷ, ಚಂದ್ರಶೇಖರ್ ಆಳ್ವ, ಅರವಿಂದ ರೈ, ಭಟ್ಯಪ್ಪ ಶೆಟ್ಟಿ, ಬಾಲಕೃಷ್ಣ ಕಾರಂತ್, ಹಾಗೂ ಯೋಜನೆಯ ವಲಯ ಅಧ್ಯಕ್ಷರುಗಳಾದ ಸುಧಾಕರ ಸಪಲ್ಯ, ರಾಬರ್ಟ್ ಪೆರ್ನಾಂಡಿಸ್, ಪ್ರಮೀಳಾ, ರಾಜೇಂದ್ರ ರೈ, ಗಣೇಶ್ ಕರೋಪಾಡಿ, ದಿನೇಶ್ ಶೆಟ್ಟಿ, ಶ್ರೀಮತಿ ತುಳಸಿ, ಮೊದಲದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲ್ಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಯೋಜನೆಯ ವಿಟ್ಲ ತಾಲೂಕಿನ ಸಾಧನ ವರದಿಯನ್ನು ವಾಚಿಸಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕೇಪು ವಲಯ ಮೇಲ್ವಿಚಾರಕ ಜಗದೀಶ್ ವಂದಿಸಿದರು. ರೇಣುಕಾ ಕಾಣಿಯೂರು ಹಾಗೂ ಮಾಣಿ ವಲಯ ಮೇಲ್ವಿಚಾರಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು. ಜನಜಾಗೃತಿ ವೇದಿಕೆಯ ಯೋಜನಾ ಅಧಿಕಾರಿ ತಿಮ್ಮಯ್ಯ ನಾಯ್ಕ್, ವಲಯ ಮೇಲ್ವಿಚಾರಕರು, ಒಕ್ಕೂಟಗಳ ಸೇವಾ ಪ್ರತಿನಿಧಿಗಳು. ಶೌರ್ಯ ತಂಡದ ಸದಸ್ಯರು ಸಹಕರಿಸಿದರು.