ಬಂಟ್ವಾಳ: ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 34 ನೇ ವರ್ಷದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.7ರಂದು ದ. ಕ. ಜಿ. ಪ. ಹಿ. ಪ್ರಾ.ಶಾಲೆ ಪೆರ್ಲಾಪು ಶಾಲಾ ವಠಾರದಲ್ಲಿ ನಡೆಯಿತು..
ಸಭಾವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ರೊ|PHF ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಅತಿಥಿಗಳಾಗಿ ಗುರುದೇವ್ ಹೋಮ್ ಪ್ರೊಡಕ್ಟ್ ಪೆರಾಜೆ ಇದರ ಮಾಲಕರಾದ ದೇಜಪ್ಪ ಪೂಜಾರಿ ಪೆರಾಜೆ, ರೋಟರಿ ಸಮುದಾಯ ದಳದ ಅಧ್ಯಕ್ಷ ಯೋಗೀಶ್ ನಾಯ್ಕ್. ಡಿ ಅಲಂಕರಿಸಿದ್ದರು.
ಸಭಾ ವೇದಿಕೆಯಲ್ಲಿ ಕಡೇಶಿವಾಲಯ ಗ್ರಾಮದ ದ.ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಹಾಗೂ ಸರಕಾರಿ ಪ್ರೌಡಶಾಲೆ ಕಡೇಶಿವಾಲಯದಲ್ಲಿ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭೆಗಳನ್ನು ಪುರಸ್ಕರಿಸಿ, ಆನಾರೋಗ್ಯದಿಂದ ವಿಕಲಚೇತನರಾದ ನೋಣಯ್ಯ ಪೂಜಾರಿ ಕೆಮ್ಮಾನು ಇವರಿಗೆ ಸಾಂತ್ವನ ನಿಧಿ ನೀಡುವುದರ ಜೊತೆಗೆ , ಅಕ್ಷರ ಸಂತ ಹರೇಕಳ ಹಾಜಬ್ಬ , ಪ್ರಗತಿಪರ ಕೃಷಿಕ ಪೆಲಿಕ್ಸ್ ಡಿ’ಸೋಜ ಪೆಲತ್ತಕಟ್ಟೆ , ಇವರನ್ನು ಸನ್ಮಾನಿಸಿ,
ಸಮಾಜ ಸೇವೆಗೈದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2022 ಪುರಸೃತರಾದ ಯುವವಾಹಿನಿ ಮಾಣಿ ಘಟಕ ಇವರನ್ನು ಅಭಿನಂದಸಿದರು.
ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ. ರಮಾನಾಥ ರೈ ಮತ್ತು ರೈ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ರೈ ಇವರುಗಳು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು..
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿ. ವಿ. ಡ್ಯಾನ್ಸ್ ಕ್ರಿವ್ ಕಡೇಶಿವಾಲಯ ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಅಮ್ಮ ಕಲಾವಿದೆರ್ ಕುಡ್ಲ ಅಭಿನಯದ ಅಲೇ ಬುಡಿಯೆರ್ ಗೆ ಎಂಬ ನಾಟಕ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಸಲಹಾ ಸಮಿತಿಯ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ,ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ವಂದಿಸಿ, ನವೀನ್ ನಾಯ್ಕ್ ಪಿಳಿಂಗಳ ಮತ್ತು ಪೂವಪ್ಪ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು.