ಬಂಟ್ವಾಳ : ಇರಾ ಗ್ರಾಮದ ಮಹಿಳಾ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿಸೋಜ ಮತ್ತು ಮಕ್ಕಳ ಗ್ರಾಮಸಭೆಯು ಸೈಪುದ್ದೀನ್ ಅಧ್ಯಕ್ಷತೆಯಲ್ಲಿ ತಾಳಿತ್ತಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ನೊಡೆಲ್ ಅಧಿಕಾರಿ ಶಾರದ, ಮಕ್ಕಳಿಗೆ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಮೋಬೈಲ್ ಉಪಯೋಗದ ಒಳಿತು- ಕೆಡುಕಿನ ಬಗ್ಗೆ ಕಿವಿ ಮಾತುಗಳನ್ನಾಡಿದರು. ಹಾಗೆಯೇ ಮಹಿಳೆಯರಿಗೆ ಆರೋಗ್ಯದ ಬಗ್ಗೆ ತಿಳಿ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿಯ ಆರೋಗ್ಯ ಸಹಾಯಕಿ ಅಮಿತ ರವರು ಮೆದುಳು ಜ್ವರ ತಡೆಗಟ್ಟಲು ಸರಕಾರದಿಂದ ಕೊಡುತ್ತಿರುವ ಚುಚ್ಚುಮದ್ದಿನ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ತಿಳಿಸಿದರು.
ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭಾರತಿ ಸಮಾಜದಲ್ಲಿ ಮಹಿಳಾ ಹಾಗೂ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮತ್ತು ಇಂತಹ ಸಂದರ್ಭದಲ್ಲಿ ತಾವು ಹೇಗೆ ರಕ್ಷಣೆ ಪಡೆಯಬೇಕು ಎಂದು ತಿಳಿಸಿದರು. ಸಾಂತ್ವಾನ ಕೇಂದ್ರದ ಕಾರ್ಯಕರ್ತೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ , ಅದರಿಂದ ಪಾರಾಗುವ ಬಗ್ಗೆ ಹಾಗೂ ಸೋಕ್ಷ್ಮ ವಿಷಯಯಗಳ ಬಗ್ಗೆ ವಿಸ್ತಾರವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಸದಸ್ಯರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಕೆ.ಟಿ.ಸುಧಾಕರ, ನಿರ್ಮಲ, ಶ ರೇಣುಕಾ, ಶ ಚಂದ್ರಪ್ರಭಾ, ವಾಣಿಶ್ರೀ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಹಬೀಬ್ ರೆಹಮಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಸೋನಿತ ತಾಳಿತ್ತಬೆಟ್ಡು , ಸವಿತ ಬಾಳೆಪುಣಿ, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎಂಬಿಕೆ ಸುಜಾತ, ಶ ನಳಿನಾಕ್ಷಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.