ಬಂಟ್ವಾಳ : ಕೃಷಿ ಇಲಾಖೆ ಅನುಷ್ಠಾನಿತ ಬೊಲ್ಪು ರೈತ ಉತ್ಪಾದಕರ ಸಂಸ್ಥೆ ಬಿ.ಸಿ.ರೋಡ್ ಇದರ ಆಡಳಿತ ಸಮಿತಿಯ ಸಭೆಯು ವ್ಯವಸ್ಥಾಪನ ನಿರ್ದೇಶಕ ರಾಜಾ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಡಿ. 19ರಂದು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ನಡೆಯಿತು.
ಸಂಸ್ಥೆಯ ಸದಸ್ಯರ ನೋಂದಾವಣೆ, ಪಾಲು ಬಂಡವಾಳ ಸಂಗ್ರಹ, ರೈತ ಉಪಯೋಗಿ ಯಂತ್ರೋಪಕರಣಗಳ ಖರೀದಿ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್. ವೀಣಾ ಮಾತನಾಡಿ ಸಂಸ್ಥೆಯು ವಿವಿಧ ಕೃಷಿ ಪೂರಕ ವಸ್ತುಗಳ ಮೌಲ್ಯವರ್ಧನೆ ಮತ್ತು ಮಾರಾಟಕ್ಕೆ ಕ್ರಮ ಕೈಗೊಳ್ಳುವರೇ ಸರಕಾರದ ಸಹಾಯ ಧನಗಳ ಬಗ್ಗೆ ವಿವರ ನೀಡಿದರು.
ಟ್ರಾಕ್ಟರ್ ಖರೀದಿ, ತೆಂಗಿನ ಎಣ್ಣೆ, ಜೇನು ತುಪ್ಪ ಉತ್ಪಾದನೆ ಮತ್ತು ಮಾರಾಟ, ಜೈವಿಕ ಗೊಬ್ಬರವನ್ನು ಮಾಡುವ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ನಂದನ್ ಶೆಣೈ, ಸಂಸ್ಥೆಯ ಕಾರ್ಯದರ್ಶಿ ಡಿ. ಸದಾನಂದ ಶೆಟ್ಟಿ ರಂಗೋಲಿ, ನಿರ್ದೇಶಕರಾದ ಕೃಷ್ಣಪ್ಪ ಸಪಲ್ಯ ಅಂತರ, ದೇವಪ್ಪ ಕುಲಾಲ್ ಕೂರಿಯಾಳ, ಆರ್ವಿನ್ ಡಿಸೋಜ, ಸೀತಾರಾಮ ಶೆಟ್ಟಿ ಜಗನ್ನಾಥ ಚೌಟ, ಜಗದೀಶ್ ಭಂಡಾರಿ, ವಿಜಯ ರೈ ವಾಮದಪದವು, ತೆಂಗು ಸಹಕಾರಿಯ ನಿರ್ದೇಶಕಿ ಅಂಬಿಕಾ ಹರೀಶ್, ಬೊಲ್ಪು ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎನ್. ಉಪಸ್ಥಿತರಿದ್ದರು.
ತೆಂಗು ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಿತ್ ಕುಮಾರ್ ಸ್ವಾಗತಿಸಿ, ಇಕೋ ಸಂಸ್ಥೆಯ ಪ್ರತಿನಿಧಿ ಸತೀಶ್ ನಾಯ್ಕ ವಂದಿಸಿದರು.