ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಡಿ.3ರಂದು ಗೀತಾಜಯಂತಿ ಆಚರಣೆ ಮಾಡಿದರು.
ಗೀತಾ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದಂದು ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ದಿನವನ್ನಾಗಿ ಆಚರಿಸುತ್ತಾರೆ.ಭಗವದ್ಗೀತೆ ಹಿಂದೂ ಧರ್ಮಿಯರ ಪವಿತ್ರ ಗ್ರಂಥ.ಜೀವನ ಮೌಲ್ಯವನ್ನು ಕಟ್ಟಿ ಕೊಡುವ ಗ್ರಂಥವಾಗಿದೆ.ಸನಾತನ ಧರ್ಮದಲ್ಲಿ ಗೀತಾ ಜಯಂತಿಗೆಅದರದ್ದೆ ಅದ ವಿಶೇಷ ಮಹತ್ವವಿದೆ.ಭಗವದ್ಗೀತೆಯು ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಜ್ಞಾನದ ಸಾರವನ್ನು ತಿಳಿಸಿದ ಮತ್ತು ಜೀವನದ ಅಂತಿಮ ಗುರಿಯ ಬಗ್ಗೆ ಜ್ಞಾನೋದಯ ಮಾಡಿದ ಕ್ಷಣವಾಗಿದೆ.ಇಂದು ಭಗವದ್ಗೀತೆಯನ್ನು ದೇಶ ವಿದೇಶದಲ್ಲಿರುವವರು ಕೂಡ ಪಠಿಸುತ್ತಾರೆ.ಭಗವಂತನಿಗೆ ಪ್ರಿಯವಾದ ಗ್ರಂಥವಾಗಿದೆ. ಭಗವದ್ಗೀತೆಯ ಬಗ್ಗೆ ವಿಜ್ಞಾನದಲ್ಲೂ ಉಲ್ಲೇಖ ಇದೆ. ಮನಶಾಸ್ತ್ರಜ್ಞರು ಕೂಡ ಈ ಭಗವದ್ಗೀತೆಯನ್ನು ಅನುಸರಿಸುತ್ತಾರೆ.ಗರ್ಭದಲ್ಲಿರುವ ಮಗು ಭಗವದ್ಗೀತೆಯನ್ನು ಕೇಳಿದಾಗ ಮಗುವಿನ ಬುದ್ದಿ ಚುರುಕಾಗುತ್ತದೆ ಎಂದು ಅಧ್ಯಾಪಕ ಜ್ಯೋತಿಶ್ರೀ ಸಿ.ಎಮ್ ಇವರು ಗೀತಾಜಯಂತಿಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ 7ನೇ ತರಗತಿಯ ವಿದ್ಯಾರ್ಥಿ ಶ್ರೀವತ್ಸರಿಂದ ಭಗವದ್ಗೀತೆಯ 5ನೇ ಅಧ್ಯಯನದ ಶ್ಲೋಕಪಠಣ ನಡೆಯಿತು.
ನಂತರ ಎಲ್ಲಾ ವಿದ್ಯಾರ್ಥಿಗಳಿಂದ ಭಗವದ್ಗೀತೆಯ 12ನೇ ಅಧ್ಯಯನದ ಶ್ಲೋಕಗಳ ಸಾಮೂಹಿಕ ಪಠಣ ನಡೆಯಿತು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಧ್ಯಾಪಕ ಪ್ರತೀಕ್ಷಾ ಶೆಟ್ಟಿ ನಿರ್ವಹಿಸಿದರು.