ಮಂಗಳೂರು:ನರರೋಗ ಮತ್ತು ಕಿವಿ ಮೂಗು ರೋಗ ಚಿಕಿತ್ಸೆಗಾಗಿ ಅತ್ಯಂತ ಸುಧಾರಿತ ಮೆಡ್ ಟ್ರೋನಿಕ್ ಸ್ಟೆಲ್ತ್ ಎಸ್ 8 ನಿರ್ಮಿತ ನ್ಯೂರೋ ಇಎನ್ಟಿ ನೇವಿಗೇಶನ್ ಸಿಸ್ಟಂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಉಪಕರಣವನ್ನು ನಗರದ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ನಲ್ಲಿ ಅಳವಡಿಸಲಾಯಿತು.
ನ್ಯೂರೋ ಸರ್ಜನ್ಗಳಾದ ಪ್ರೊ|ಡಾ.ಎ.ರಾಜ ಮತ್ತು ಪ್ರೊ|ಡಾ.ಎನ್.ಶಂಕರ್ ಉದ್ಘಾಟಿಸಿ ಶುಭ ಕೋರಿದರು. ಮಂಗಳಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗಣಪತಿ ಪಿ., ನಿರ್ದೇಶಕಿ ಡಾ.ಅನಿತಾ ಜಿ. ಭಟ್., ಮಂಗಳಾ ಕಿಡ್ನಿ ಫೌಂಡೇಶನ್ನ ನಿರ್ದೇಶಕ ಡಾ.ಮೊಯಿದ್ದೀನ್ ನಫಸೀರ್ ಇ.ಎನ್.ಟಿ.ಸರ್ಜನ್ ಡಾ.ಗೌತಮ್ ಉಪಸ್ಥಿತರಿದ್ದರು.ಮಾನವ ದೇಹದ ಅತ್ಯಂತ ಸವಾಲಿನ ಹಾಗೂ ಸೂಕ್ಷ್ಮ ಚಿಕಿತ್ಸೆಗಳಲ್ಲಿ ಮೆದುಳಿನ ಚಿಕಿತ್ಸೆ ಸವಾಲಿನದ್ದಾಗಿದೆ ಹಾಗೂ ಕ್ಲಿಷ್ಟಕರವಾಗಿದೆ. ಇಂಥಹ ಚಿಕಿತ್ಸೆಗಳಿಗೆ ಪೂರಕವಾಗಿ ಚಿಕಿತ್ಸೆಯ ಸಮಯದಲ್ಲಿ ನ್ಯೂರೋ ಸರ್ಜರಿಯಲ್ಲಿ ವಿಶ್ವದಾದ್ಯಂತ ಬಳಸಲು ಪ್ರಾರಂಭಿಸುವ ನ್ಯೂರೋ ನೇವಿಗೇಶನ್ ಸಿಸ್ಟಂ ಮೆದುಳಿನ ಆಳವಾದ ಜಾಗಗಳ ತೊಂದರೆಗಳನ್ನು ಸರಿ ಪಡಿಸಲು ಹಾಗೂ ಇತರ ಗೆಡ್ಡೆಗಳ ನಿವಾರಣೆಗೆ ಸಾಧ್ಯವಾಗುತ್ತದೆ. ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಈ ಉಪಕರಣವನ್ನು ಮಂಗಳಾ ಆಸ್ಪತ್ರೆಯಲ್ಲಿ ಅಳವಡಿಸ ಲಾ ಗಿದ್ದು ಮುಂದಿನ ದಿನಗಳಲ್ಲಿ ಇದು ಬಹಳ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳಿಗೆ ನೆರವಾಗಲಿದೆ ಎಂದು ಮಂಗಳಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗಣಪತಿ ಪಿ.ಅವರು ತಿಳಿಸಿದರು.
ಅತೀ ಸೂಕ್ಷ್ಮವಾದ ಮೆದುಳಿನ ಭಾಗದ ಶಸ್ತ್ರ ಚಿಕಿತ್ಸೆಯನ್ನು ಸಣ್ಣ ರಂದ್ರದ ಮೂಲಕ ಮಾಡುವ ಶಸ್ತ್ರ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿಯಾಗಿದೆ.ಈ ಹಿಂದೆ ಬಹಳ ಕಷ್ಟದಲ್ಲಿ ನಡೆಸಲಾಗುತ್ತಿದ್ದ ಹಲವು ಶಸ್ತ್ರ ಚಿಕಿತ್ಸೆ ಈಗ ನೇವಿಗೇಶನ್ ಮೂಲಕ ಸರಳ ಹಾಗೂ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದರು.ಶಸ್ತ್ರ ಚಿಕಿತ್ಸೆಯ ಮೊದಲೇ ಉಪಕರಣದ ಮೂಲಕ ಮೆದುಳಿನ ಒಳಭಾಗದ ಸೂಕ್ಷ್ಮ ಪ್ರದೇಶದ ಮಾಹಿತಿಯನ್ನು ಪಡೆದು ಚಿಕಿತ್ಸೆಯನ್ನು ಮಾಡಲಾಗುವುದು.ಬಯಾಪ್ಸಿ ಮೂಲಕ ಮೂಗಿನ ಒಳಗಿನಿಂದ ಪಿಟ್ಯೂಟರಿ ಗ್ರಂಥಿಯ ಚಿಕಿತ್ಸೆ, ತಲೆ ಚಿಪ್ಪಿನ ಒಳಗಿರುವ ಟ್ಯೂಮರ್ ಮತ್ತು ಗಡ್ಡೆಗಳ ಚಿಕಿತ್ಸೆಯಲ್ಲಿ ಈ ಉಪಕರಣ ಅತ್ಯಂತ ಸೂಕ್ತವಾಗಿದೆ ಮಾತ್ರವಲ್ಲದೆ ಚಿಕಿತ್ಸೆ ಸಂದರ್ಭ ಸುತ್ತಲಿರುವ ಸೂಕ್ಷ್ಮ ಭಾಗಗಳಿಗೆ ಹಾನಿಯಾಗದಂತೆ ರಕ್ಷಿಸಲು ಈ ವ್ಯವಸ್ಥೆಯು ಬಹಳಷ್ಟು ಪರಿಣಾಮಕಾರಿಯಾಗಿದೆ ಮತ್ತು ರಕ್ತ ಸ್ರಾವವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ತಲೆಬುರುಡೆಯ ತಳಭಾಗದ ಮೆದುಳು ಮತ್ತು ಮೂಗು ಅಲ್ಲದೆ ಸೈನಸ್ಗಳ ನಡುವಿನ ಪ್ರದೇಶಗಳ ಚಿಕಿತ್ಸೆ ಶ್ರವಣ ದೋಷ ಮತ್ತು ಅಸಮತೋಲನ ಸಮಸ್ಯೆಗಳನ್ನೂ ಪರಿಣಾಮಕಾರಿಯಾಗಿ ಸರಿಪಡಿಸಲು ಇದು ಸಹಾಯಕವಾಗಿದೆ ಎಂದು ಡಾ.ಗಣಪತಿ ತಿಳಿಸಿದರು.