ವಿಟ್ಲ: ಬಂಟ್ವಾಳ ತಾಲೂಕಿನ ಮಣಿಹಳ್ಳ , ಸರಪಾಡಿ, ಅಜಿಲಮೊಗರು, ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಧಾರ್ಮಿಕ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಹಲವಾರು ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳು ಇವೆ. ಕಳೆದ ಕೆಲವಾರು ದಿನಗಳಿಂದ ವಿವಿಧ ಸಂಘಟನೆಯವರು ಏಸುವಿನ ವಿಗ್ರಹ ತೆರವುಗೊಳಿಸಲು ಮನವಿ ಸಲ್ಲಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪ್ರಮುಖ ವಿವಾದಿತ ಸ್ಥಳದ ಮುಂಭಾಗದಲ್ಲಿರುವ ಸರಕಾರಿ ಸ್ಥಳದಲ್ಲಿ ಸಂಘಟನೆ ಗೆ ಸೇರಿದ ಕಟ್ಟೆಯಿದೆ.
ಆದ್ದರಿಂದ ಸರ್ವ ಧರ್ಮೀಯತಿಗೂ ಸಮಾನ ನ್ಯಾಯ ಒದಗಿಸಿಕೊಟ್ಟು ಶಾಂತಿ ವ್ಯವಸ್ಥೆ ಕಾಪಾಡಬೇಕೆಂದು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಲ್ಲಿಪಾದೆ ಘಟಕದ ಅಧ್ಯಕ್ಷ ಸ್ಟ್ಯಾನಿ ಮಿನೇಜಸ್ ರವರು ಬಂಟ್ವಾಳ ತಹಶಿಲ್ದಾರ್ ಡಾ. ಸ್ಮಿತಾರಾಮು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್, ಸದಸ್ಯರುಗಳಾದ ಪ್ರವೀಣ್ ಪಿಂಟೊ, ನೇವಿಲ್ ಪಿಂಟೋ, ಅವಿನಾಶ್ ಪಿಂಟೊ, ಮೇಲಿ ಲಸಾದೊ, ಪ್ರಮುಖರಾದ ನವೀನ್ ಮೋರಾಸ್, ಲವೀನಾ ಮೋರಾಸ್ ಮೊದಲಾದವರು ಉಪಸ್ಥಿತರಿದ್ದರು.