ಬಂಟ್ವಾಳ: ನ.21ರಂದು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಸ್ಥಳ ಶ್ರೀರಾಮ ಭಜನಾ ಮಂದಿರ ಅಲ್ಲಿಪಾದೆಯಲ್ಲಿ ಸರಪಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ,ನಾವೂರು, ಮಣಿನಾಲ್ಕೂರು, ಉಳಿ, ಬಡಗಕಜೆಕಾರು, ಕಾವಳಪಡೂರು, ಕಾವಳಮೂಡೂರು ಪಂಚಾಯತ್ ಗಳ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಇಲಾಖೆಗಳು ಪಂಚಾಯತ್ ರಾಜ್, ಕಂದಾಯ ,ಆರಕ್ಷಕ ,ಮೆಸ್ಕಾಂ , ಕೃಷಿ, ಅರಣ್ಯ, ಅಬಾಕಾರಿ, ತೋಟಗಾರಿಕೆ , ಲೋಕೊಪಯೋಗಿ , ಪಂಚಾಯತ್ ರಾಜ್ ಇಂಜಿನಿಯರಿಂಗ್, ,ಗ್ರಾ ಕುಡಿಯುವ ನೀರು ಮತ್ತು ಇಂಜಿನಿಯರಿಂಗ್ ಉಪವಿಭಾಗ ಬಂಟ್ವಾಳ, ಸಮಾಜ ಕಲ್ಯಾಣ , ಹಿಂದುಳಿದ ವರ್ಗ, ಶಿಕ್ಷಣ, ಆರೋಗ್ಯ ,ಮಹಿಳಾ ಮತ್ತು ಕಲ್ಯಾಣ ,ವಿಶೇಷ ಚೇತನರ, ಅಲ್ಪಸಂಖ್ಯಾತರ ಕಲ್ಯಾಣ, ಕೆ.ಎಸ್.ಆರ್.ಟಿ.ಸಿ , ಸಣ್ಣನೀರಾವರಿ ಇಲಾಖೆ , ಪಶುಸಂಗೋಪನೆ , ಸಾರಿಗೆ ಇಲಾಖೆ , ಸಂಚಾರಿ ಪೋಲೀಸ್ , ಭೂ ಮಾಪನ 25.ಕಾರ್ಮಿಕ ಇಲಾಖೆಗಳು ಭಾಗವಹಿಸುತ್ತವೆ ಎಂದು ಪ್ರಕಟನೆ ತಿಳಿಸಿದೆ.
ಗ್ರಾಮ ಒನ್ ಸೇವೆಗಳು ಸ್ಥಳದಲ್ಲೇ ಲಭ್ಯವಿದ್ದು ಆಭಾ ಕಾರ್ಡ್, ಕಟ್ಟಡ ಕಾರ್ಮಿಕರ ಕಾರ್ಡ್ ಇ -ಶ್ರಮ್ ಕಾರ್ಡ್ ಸೇರಿದಂತೆ ಅನೇಕ ಸರಕಾರಿ ಸೌಲಭ್ಯಗಳು ಲಭ್ಯವಿರಲಿದೆ.