ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ 119ನೇ ರಕ್ತದಾನ ಶಿಬಿರ

0

ಬಂಟ್ವಾಳ: ಬಹುತೇಕ ತುರ್ತು ಸಂದರ್ಭದಲ್ಲಿ ರೋಗಿಗೆ ಜೀವ ಉಳಿಸಲು ರಕ್ತದಿಂದ ಮಾತ್ರ ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಇಲ್ಲಿನ ಫರಂಗಿಪೇಟೆಯಲ್ಲಿ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಅ.16ರಂದು ನಡೆದ 119ನೇ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾಂಜಲಿ ಆರೋಗ್ಯ ಕೇಂದ್ರದ  ವೈದ್ಯ ಡಾ. ಚೇತನ್ ಆರೋಗ್ಯ ಮತ್ತು ರಕ್ತದಾನ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ, ಕಳೆದ 28 ವರ್ಷಗಳಿಂದ ರಕ್ತದಾನ ಶಿಬಿರ ಇಲ್ಲಿನ ನಡೆಯುತ್ತಿದೆ ಎಂದರು. ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಕೆ.ಎಸ್.ಹೆಗ್ಡೆ ಬ್ಲಡ್ ಬ್ಯಾಂಕಿನ ಡಾ. ಕುನಾಲ್ ಕುಮಾರ್, ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್, ಪ್ರಮುಖರಾದ ಬಿ. ನಾರಾಯಣ ಮೇರಮಜಲು, ಕೇಶವ ದೋಟ, ಜಗದೀಶ್ ಗಟ್ಟಿ ತುಂಬೆ, ಜಯರಾಂ ತುಂಬೆ, ಅರ್ಜುನ್ ಪೂಂಜ, ಪ್ರಶಾಂತ್ ತುಂಬೆ, ಎಂ.ಕೆ. ಖಾದರ್, ಪುನೀತ್ ಸೇಮಿತ, ವಲಯ ಮೇಲ್ವಿಚಾರಕಿ ಮಮತಾ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here