ತುಂಬೆ ಗ್ರಾಮ ಪಂಚಾಯತ್ ನಲ್ಲಿ ಎಫ್‌.ಟಿ.ಕೆ ತರಬೇತಿ

0

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ – 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್ ನಲ್ಲಿ FTK ತರಬೇತಿ ಅ.11ರಂದು ಆಯೋಜಿಸಲಾಗಿತ್ತು.

ಈ ತರಬೇತಿಯಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರವೀಣ್, ಉಪಾದ್ಯಕ್ಷೆ ಜಯಂತಿ ಕೇಶವˌ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ,ಹಾಗೂ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರುˌ ಉಪಾಧ್ಯಕ್ಷರುˌ ಸದಸ್ಯರು , ನೀರು ಗಂಟಿಗಳುˌ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅನುಷ್ಥಾನ ಬೆಂಬಲ ಸಂಸ್ಥೆಯ ಹೆಚ್ ಆರ್ ಡಿ ಚರಣ್ ರಾಜ್ ಜಲ ಜೀವನ್ ಮಿಷನ್ ಹಾಗೂ ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಈ
ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬಂಟ್ವಾಳ ತಾಲೂಕಿನ ಸಮುದಾಯ ಸಂಘಟಕರಾದ ವಿಲ್ಮಾ ಮತ್ತು ಚಂದ್ರಶೇಖರ್ ಆಯೋಜಿಸಿ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here