ಕೊಯಿಲ: 20ನೇ ವರ್ಷದ ಶಾರದೋತ್ಸವ

0

ಸ್ಥಳದಾನಿಗಳಿಗೆ ಸನ್ಮಾನ, ರೂ 10ಲಕ್ಷ ಅನುದಾನ ಶಾಸಕರ ಭರವಸೆ

ಬಂಟ್ವಾಳ ತಾಲ್ಲೂಕಿನ ಕೊಯಿಲ ಹನುಮಾನ್ ನಗರದಲ್ಲಿ ಬುಧವಾರ ನಡೆದ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು. ರಾಯಿ-ಕೊಯಿಲ- ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಹನುಮಾನ್ ನಗರದಲ್ಲಿ ಅ.5ರಂದು ನಡೆದ ಸಾರ್ವಜನಿಕ ಶ್ರೀ ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ರಾಜೇಶ್‌ ನಾಯ್ಕ್ ರಂಗಮಂದಿರಕ್ಕೆ ರೂ ೧೦ಲಕ್ಷ ಮೊತ್ತದ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣದಲ್ಲಿ ‘ಕಾಶ್ಮೀರ ಪುರವಾಸಿನಿಯ ಎಲ್ಲೆಡೆ ಆರಾಧನೆಯಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಉದ್ಯಮಿ ದಿಲ್ ರಾಜ್ ಆಳ್ವ ಮಂಗಳೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿ ಬಿ.ರಘು ಸಪಲ್ಯ ಪಾಣೆಮಂಗಳೂರು ಶುಭ ಹಾರೈಸಿದರು. ಇದೇ ವೇಳೆ ೨೫ ಸೆಂಟ್ಸ್ ಜಮೀನು ಕೊಡುಗೆ ನೀಡಿದ ಸ್ಥಳದಾನಿ ಶಶಿಕಲಾ ಎಂ.ದೇವಪ್ಪ ಶೆಟ್ಟಿ ಮಾವಂತೂರು, ಪೂರ್ಣಿಮಾ ಎಂ.ದುರ್ಗಾದಾಸ್ ಶೆಟ್ಟಿ, ಎಂ.ಗೀತಾ ಸುಭಾಶ್ಚಂದ್ರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ರಾಯಿ ಗ್ರಾ.ಪಂ.ಅಧ್ಯಕ್ಷೆ ರತ್ನಾ ಆನಂದ, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಪ್ರಮುಖರಾದ ಡಾ.ಸುರೇಖ ಶೆಟ್ಟಿ ಮುಡಿಪು, ಕಿರಣ್ ಕುಮಾರ್ ಮಂಜಿಲ, ಜಯಪ್ರಕಾಶ್ ಜಕ್ರಿಬೆಟ್ಟು, ಸುಪ್ರೀತ್ ಆಳ್ವ ಪೊನ್ನೋಡಿ, ಸುದರ್ಶನ್ ಬಜ, ಶಾರದೋತ್ಸವ ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಅರಳ, ಕಾಯ್ದರ್ಶಿ ಉಮೇಶ ಡಿ.ಎಂ. ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here