ನಾವೂರು ಪರಿಸರದಲ್ಲಿ ಕಾನೂನು ಬಾಹಿರ ಕೃತ್ಯ; ಸಿ.ಸಿ. ಕೆಮರಾ ಅಳವಡಿಸಲು ಪೊಲೀಸ್‌ ಇಲಾಖೆಗೆ ಸರಪಾಡಿ ಅಶೋಕ್ ಶೆಟ್ಟಿ ಮನವಿ

0

ಬಂಟ್ವಾಳ: ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಮೂಲಕ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರು ಮತ್ತು ಆರಕ್ಷಕ ಸಹಾಯಕ ನಿರೀಕ್ಷಕರಿಗೆ ಖ್ಯಾತ ಯಕ್ಷಗಾನ ಕಲಾವಿದರೂ ಆಗಿರುವ ಬಿಜೆಪಿ ಮುಖಂಡ ಸರಪಾಡಿ ಅಶೋಕ್ ಶೆಟ್ಟಿ ಮನವಿ ಮಾಡಿದ್ದಾರೆ.


ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಮತ್ತು ನಾವೂರು ಗ್ರಾಮದ ಮಣಿಹಳ್ಳ ಹಾಗೂ ಕಾವಳ ಮೂಡೂರು ಗ್ರಾಮದ ಮೇಲಿನ ವಗ್ಗ( ಕಾರಿಂಜ ಕ್ರಾಸ್), ಸರಪಾಡಿ ಗ್ರಾಮದ ಮುನ್ನಲಾಯಿ ಪದವು ಪ್ರದೇಶಗಳು ಅನೇಕ ಮಂದಿ ಓಡಾಡುವ ಮುಖ್ಯ ಸ್ಥಳವಾಗಿದೆ. ಇತ್ತೀಚೆಗೆ ಅನೇಕ ಅಹಿತಕರ ಘಟನೆಗಳು ಪ್ರಮುಖವಾಗಿ ಕಳ್ಳತನ, ದರೋಡೆ, ಅಕ್ರಮ ಗೋವು ಸಾಗಾಟ, ನಾವೂರಿಗೆ ಭಯೋತ್ಪಾದಕರ ಸಂಪರ್ಕ, ನಾವೂರಿನಲ್ಲಿ ರಾಸಾಯನಿಕ ಗೊಬ್ಬರ ಕಲಬೆರಕೆ ಮತ್ತು ಅನುಚಿತ ವರ್ತನೆಯ ಕಿಡಿಗೇಡಿ ಕೃತ್ಯಗಳು ಈ ಸ್ಥಳಗಳಲ್ಲಿ ನಡೆದಿದೆ. ಬೇರೆ ಬೇರೆ ಊರಿನಲ್ಲಿ ನೋಂದಾವಣೆ ಆದ ವಾಹನಗಳು ಮತ್ತು ಅಪರಿಚಿತ ವ್ಯಕ್ತಿಗಳು ಇಲ್ಲಿ ಸುತ್ತಾಡುವುದನ್ನು ಗಮನಿಸುತ್ತಿದ್ದೇವೆ. ಇದೆಲ್ಲಾ ಮೇಲಿನ ವಿಷಯಗಳನ್ನು ಪುಷ್ಟಿಕರಿಸುತ್ತದೆ. ವಿಧ್ವoಸಕ ಕೃತ್ಯ ನಡೆದ ಮೇಲೆ ಯೋಚಿಸುವುದಕ್ಕಿಂತ ಮೊದಲೇ ಎಚ್ಚರ ಗೊಂಡರೆ ಉತ್ತಮ. ಈ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿ ಅವರಿಗೂ ಕರ್ತವ್ಯ ಪ್ರಜ್ಞೆ ಮೂಡಿಸಲು ಪೊಲೀಸ್ -ನಾಗರಿಕರ ಮುಖಾಮುಖಿ ಕಾರ್ಯಕ್ರಮ ನಡೆಸಲು ವಿಶೇಷ ಗ್ರಾಮಸಭೆ ನಡೆಸಿದರೆ ಗ್ರಾಮಸ್ಥರು ಜಾಗೃತಿ ಹೊಂದಬಹುದು. ಆರಕ್ಷಕ ಇಲಾಖೆಗೂ ಸಹಕಾರಿ ಆದೀತು. ಇದನ್ನು ಅನುಷ್ಠಾನ ಮಾಡಲು ಇಚ್ಛಾಶಕ್ತಿ ಬೇಕು. ಬಂಟ್ವಾಳ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಪ್ರಬುದ್ಧರಿದ್ದಾರೆ ಈ ಬಗ್ಗೆ ಗಮನ ಹರಿಸಿ ತಕ್ಷಣ ಮೊತ್ತ ಮೊದಲಿಗೆ ಮೇಲೆ ಸೂಚಿಸಿದ 4 ಸ್ಥಳಗಳಿಗೆ ಸಿಸಿ(ಕಣ್ಗಾವಲು) ಅಳವಡಿಸ ಬೇಕೆಂದು ಆಗ್ರಹ ಪಡಿಸುತ್ತಿದ್ದೇನೆ ಎಂದು ಸರಪಾಡಿ ಗ್ರಾ.ಪಂ. ಬೀಟ್‌ ಕಮಿಟಿ ಸದಸ್ಯರೂ ಆಗಿರುವ ಸರಪಾಡಿ ಅಶೋಕ ಶೆಟ್ಟಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here