ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಜನೆ ಮತ್ತು ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಭಜನೆ ಮತ್ತು ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆ.2ರಂದು ಆಚರಿಸಲಾಯಿತು.


ಶ್ರೀರಾಮ ಪ್ರೌಢ ಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಚೈತ್ರಾ ಮಾತಾನಾಡಿ ಶ್ರೀರಾಮ ಶಾಲೆಯು ದೇವಸ್ಥಾನವಿದ್ದಂತೆ ಇಲ್ಲಿ ನೈತಿಕ ಶಿಕ್ಷಣ ದೊರಕುತ್ತದೆ.ಹುಟ್ಟುಹಬ್ಬಎನ್ನುವುದೇ ಸಂಭ್ರಮ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುವ ಈ ಕಾಲಘಟ್ಟದಲ್ಲಿ ಒಟ್ಟಾಗಿ ಹುಟ್ಟುಹಬ್ಬಆಚರಿಸುತ್ತಿರುವುದು ವಿಶೇಷ, ಹುಟ್ಟುಹಬ್ಬಆಚರಿಸುವ ಮಕ್ಕಳು ಶ್ರದ್ಧಾನಿಧಿ ಅರ್ಪಿಸುತ್ತಾರೆ.ಆ ಹಣ ಸಮಾಜದ ಒಳಿತಿಗಾಗಿ ಅಂದರೆ ನಿರಾಶ್ರಿತರಿಗೆ ಕೊಡುತ್ತಾರೆ, ಇದಕ್ಕಿಂತ ಪುಣ್ಯದ ಕೆಲಸ ಬೇರೊಂದು ಇಲ್ಲ. ಹಾಗೆಯೇ ಪ್ರತಿ ಮನೆಯಲ್ಲೂ ದಿನನಿತ್ಯ ಭಜನೆ ಮಾಡಬೇಕು.ಭಕ್ತರು ಕೂತು ಭಜನೆ ಮಾಡಿದರೆ ಭಗವಂತ ನಿಂತು ಕೇಳುತ್ತಾನೆ, ನಿಂತು ಮಾಡಿದರೆ ಕುಣಿದು ಕೇಳುತ್ತಾನೆ. ಕುಣಿದು ಮಾಡಿದರೆ ನಮ್ಮೊಳಗೆ ಸೇರುತ್ತಾನೆ ಎಂದು ಭಜನೆ ಹಾಗೂ ಹುಟ್ಟುಹಬ್ಬದ ಮಹತ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಟ್ಟುಹಬ್ಬಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದ ಆರತಿ, ಅಕ್ಷತೆ, ತಿಲಕಧಾರಣೆ ಮಾಡಿ ಸಿಹಿ ನೀಡಿದರು.ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚಣೆ ಮಾಡಿ, ನಿಧಿ ಸಮರ್ಪಿಸಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.ಬಹುಮಾನ ವಾಚನವನ್ನುಅಧ್ಯಾಪಕಿ ರೇಷ್ಮಾಗೌಡ, ಪ್ರೀತಾ, ಮತ್ತು ರಮ್ಯ ಜೆ ವಾಚಿಸಿದರು.

ವೇದಿಕೆಯಲ್ಲಿ ಹೂಹಾಕುವ ಕಲ್ಲಿನ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಪೂವಪ್ಪ ಟೈಲರ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಮತ್ತು ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಜಯರಾಮ ನೀರಪಾದೆ, ಶ್ರೀರಾಮ ಸೌಹಾರ್ದಸಹಕಾರಿ ನಿಯಮಿತ ಬ್ಯಾಂಕಿನ ಅಧ್ಯಕ್ಷ ಕುಲ್ಯಾಡಿ ನಾರಾಯಣ ಶೆಟ್ಟಿಹಾಗೂ ಮುಖೋಪಾಧ್ಯಾಯ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಲಿಪಿ ಸ್ವಾಗತಿಸಿ, ಸುಕೇಶ್‌ ನಿರೂಪಿಸಿ, ದರ್ಶನ್ ವಂದಿಸಿದರು.

LEAVE A REPLY

Please enter your comment!
Please enter your name here