ಮಂಗಳೂರು: ಕೋವಿಡ್ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ತಂಡ ರೋಗಿಗಳ ಪ್ರಾಣ ಉಳಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ನೆನಪಿಸಿಕೊಂಡರು. ಅವರು
ವೆನ್ಲಾಕ್ ಆಸ್ಪತ್ರೆ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಜಿಲ್ಲೆ. ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವವಿದ್ಯಾನಿಲಯ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಸಮುದಾಯ ವಾಚನಾಲಯ ಸಮನ್ವಯ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಆ.22ರಂದು ಸಮುದಾಯ ವಾಚನಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆಮ್ಲಜನಕದ ತುರ್ತು ಅಗತ್ಯವಿತ್ತು, ಆಮ್ಲಜನಕ ಸಹಿತವಾದ ಹಾಸಿಗೆಗಳ ಸಂಖ್ಯೆಯೂ ಕಡಿಮೆ ಇತ್ತು ಕೇರಳ,ಬಳ್ಳಾರಿ ಆಮ್ಲಜನಕ ತಯಾರಿಕಾ ಘಟಕಗಳಿಂದ ಆಮ್ಲಜನಕ ಪೂರೈಕೆಯಾಗುತ್ತಿತ್ತು, ಸ್ವಲ್ಪ ಯಾಮಾರಿದರೂ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆಯಿಂದ ಪ್ರಾಣಾಪಾಯ ಉಂಟಾಗುವ ಸ್ಥಿತಿ ಉಂಟಾಗಿತ್ತು, ಆದರೆ ಆ ಬಳಿಕದ ದಿನಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿಕೊಂಡ ಕಾರಣ ಇಂದು ವೆನ್ಲಾಕ್ ಆಸ್ಪತ್ರೆ ಸುಸಜ್ಜಿತವಾದ ಆಮ್ಲಜನಕ ಪೂರೈಸುವ ಘಟಕ ಹೊಂದಿದೆ.ಆಮ್ಲಜನಕ ಸಹಿತದ ಹಾಸಿಗೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂದರು.
ಉದ್ಘಾಟಕರಾಗಿ ಭಾಗವಹಿಸಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶುಭ ಹಾರೈಸಿ ವೆನ್ಲಾಕ್ ಆಸ್ಪತ್ರೆ,ಅಲ್ಲಿನ ರೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ದ ದೃಷ್ಟಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಮಿತಿಯ ಮೂಲಕ ಹಮ್ಮಿಕೊಂಡಿರುವ ಸಮುದಾಯ ಸಹಾಯ ಕೇಂದ್ರ, ಸಮುದಾಯ ವಾಚನಾಲಯ ಸಮಾಜಕ್ಕೆ ಮಾದರಿ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ ದಾನಿಗಳಿಗೆ ಗೌರವಾರ್ಪಣೆ ಮಾಡಿ ಸಮುದಾಯ ವಾಚನಾಲಯ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಣೆಗೆ ಮನಪಾ ವತಿಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅತಿಥಿ ಗಳಾಗಿ ದ.ಕ.ಜಿ.ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್,ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ,ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಅನ ಸೂಯ ರೈ, ಅನಘ ರಿಫೈನರೀಸ್ ಪ್ರೈವೇ ಟ್ .ಲಿ.ನ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಕೆಐಒಸಿಎಲ್ (ಎಚ್ .ಆರ್ &ಕೊ ಆರ್ಡಿನೇಶನ್ ) ಹಿರಿಯ ಪ್ರಬಂಧ ಕ ಮುರುಗೇಶ್,ಮಹಾರಾಷ್ಟ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ,ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಮತ್ತು ಸಮುದಾಯ ವಾಚನಾಲಯ ಮಂಗಳೂರು. ದ.ಕ.ಜಿಲ್ಲೆಯ ಸಮನ್ವಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ವೆನ್ಲಾಕ್ ಅಧೀಕ್ಷಕ ಸದಾಶಿವ ಸ್ವಾಗತಿಸಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಜಿಲ್ಲೆಯ ಸಭಾಪತಿ ಶಾಂತರಾಮ ಶೆಟ್ಟಿ ವಂದಿಸಿ, ಹಿರಿಯ ವೈದ್ಯ ಡಾ.ಕೆ.ಆರ್ ಕಾಮತ್ ಸಮುದಾಯ ವಾಚನಾಲಯದ ರೂಪುಗೊಂಡ ಬಗ್ಗೆ ವಿವರಿಸಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮನ್ವಯ ಸಮಿತಿ ಯ ಸದಸ್ಯ ಭಾಸ್ಕರ ರೈ ಕಟ್ಟ ,ಪುಷ್ಷರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.