ಆ.23ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಚಾಲನೆ

0

ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 28.5 ಕೋಟಿ ರೂ ಮೊತ್ತದ 56 ಗ್ರಾಮಗಳ 231 ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯ 73.75 ಕೋಟಿ ರೂ ಮೊತ್ತದ 22 ಕಾಮಗಾರಿಗಳು ಸೇರಿ ಒಟ್ಟು 102.5 ಕೋಟಿ ರೂ ಮೊತ್ತದ 253 ಕಾಮಗಾರಿಗಳ ಶಿಲಾನ್ಯಾಸ ಮತ್ತು ಕಾಮಗಾರಿಯ ಆರಂಭ ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಆ.23ರಂದು ನಡೆಯಲಿದೆ.

ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಅವರ ಮುತುವರ್ಜಿ ವಹಿಸಿ ಅನುದಾನ ತಂದುಕೊಡುವಳ್ಳಿ ಯಶಸ್ವಿಯಾಗಿದ್ದಾರೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಕ್ಷೇತ್ರದಾದ್ಯಂತ ಶಿಲಾನ್ಯಾಸ ಮತ್ತು ಕಾಮಗಾರಿಗೆ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here