ಬೆಂಗಳೂರು: ಈ ಹಿಂದೆ ರಾಜ್ಯೋತ್ಸವ ಪ್ರಶಶ್ತಿಗೆ ಅರ್ಜಿಗಳ ಮೂಲಕ ಆಹ್ವಾನಿಸಲಾಗುತ್ತಿದ್ದು ಈ ಬಾರಿ ಅದಕ್ಕೆ ಕಡಿವಾಣ ಹಾಕಿ ಜನರ ಮೂಲಕವೇ ಸಾಧಕರನ್ನು ಆಯ್ಕೆ ಮಾಡಲಾಗುವುದು ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಈ ವರ್ಷ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿವೆ.
ಸಮಿತಿ ರಚನೆ :
ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲು ವಿಜೇತರನ್ನು ಸಮಿತಿ ರಚನೆಯ ಮೂಲಕ ಮಾಡಲಾಗುತ್ತದೆ, ಸಮಿತಿಯೇ ರಾಜ್ಯದ ಜನರ ಸಲಹೆಯನ್ನು ಪಡೆದು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಅಂಗವಾಗಿ ನಡೆಯುತ್ತಿರುವ ನಾಟಕ ಪ್ರದರ್ಶನವನ್ನು ಡಿಸೆಂಬರ್ವರೆಗೂ ನಡೆಸುವ ಚಿಂತನೆ ಇದೆ ಎಂದರು. ಸಚಿವರ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.