ಹಿರಿಯ ನಿವೃತ್ತ ಪ್ರಾಂಶುಪಾಲ ಕೆ.ಪಿ ಸೂಫಿ ಅವರಿಗೆ ಗೌರವಾರ್ಪಣೆ

0

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಹಿರಿಯ ನಿವೃತ್ತ ಶಿಕ್ಷಕರ ಗೌರವಾರ್ಪಣೆಯ ಸಲುವಾಗಿ ಬಂಟ್ವಾಳ ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಪಿ.ಸೂಫಿ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಅಧ್ಯಕ್ಷರಾದ ಅಕ್ಬರ್ ಅಲಿ ಸ್ವಾಗತಿಸಿ, ಸಮನ್ವಯ ಬೆಳೆದು ಬಂದ ಬಗೆಯನ್ನು ತಿಳಿಸಿದರು. ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂಫಿ ಅವರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಅಬ್ದುಲ್ ಮಜೀದ್ ಎಸ್ ಮತ್ತು ಮಾಜಿ ಅಧ್ಯಕ್ಷರಾದ ಸಮೀವುಲ್ಲಾ ಅಭಿನಂದನಾ ನುಡಿಗಳನ್ನಾಡಿದರು.. ಸೂಫಿ ಅವರು ತಮ್ಮ ಕರ್ತವ್ಯದ ದಿನಗಳನ್ನು ಸ್ಮರಿಸಿ,ಕೃತಜ್ಞತೆಯ ಮಾತುಗಳನ್ನಾಡಿದರು. ಮಾಜಿ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತರಾದ ಹಾಜಿ ಬಿ. ಎಂ.ತುಂಬೆ ಅವರು ಧನ್ಯವಾದ ಅರ್ಪಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಮನಾಝಿರ್ ಮುಡಿಪು ಸನ್ಮಾನಿತರ ಸಂದರ್ಶನ ನಡೆಸಿದರು. ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಮುಹಮ್ಮದ್ ಶಾಹಿದ್, ಕೋಶಾಧಿಕಾರಿಗಳಾದ ಮುಹಮ್ಮದ್ ಇಕ್ಬಾಲ್ ಯು ,ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಹಾರಿಸ್ ಬಾಂಬಿಲ,ಸದಸ್ಯರಾದ ಹಮೀದ್, ಅಸ್ಮಾ ಗಡಿಯಾರ ಮತ್ತು ಸೂಫಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here