ಬಂಟ್ವಾಳ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2025ರ ಜೂನ್ ತಿಂಗಳಿನಲ್ಲಿ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮೋನಪ್ಪ ನಾಯ್ಕ(52) ಎಂಬಾತನಿಗೆ ನ್ಯಾಯಾಲಯವು 2 ವರ್ಷ 6 ತಿಂಗಳ ಶಿಕ್ಷೆ ಮತ್ತು ರೂ 40 ಸಾವಿರ ದಂಡದ ಶಿಕ್ಷೆ ವಿಧಿಸಿ ಅದೇಶಿಸಿರುತ್ತದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಕೀರಪ್ಪ ಘಟಕಾಂಬಳೆ, ಹಾಗೂ ಪಿ ಎಸ್ ಐ ಕೃಷ್ಣಕಾಂತ ಪಾಟೀಲ್ , ಪ್ರಕರಣದ ಆರೋಪಿ ಮೋನಪ್ಪ ನಾಯ್ಕ ಎಂಬಾತನ ವಿರುದ್ಧ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಮಂಗಳೂರು ನ್ಯಾಯಾಲಯದಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ರವರು ಆರೋಪಿಗೆ ಜು.31ರಂದು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಿಕರಾದ ಸಹನಾದೇವಿ ನ್ಯಾಯಾಲಯದಲ್ಲಿ ವಾದಿಸಿದ್ದರು.








