ಕೊಡಾಜೆ: ಗಾಳಿ-ಮಳೆಗೆ ರಸ್ತೆಗೆ ಬಿದ್ದ ಮರ-ತೆರವು

0

ಬಂಟ್ವಾಳ: ಭಾರೀ ಗಾಳಿ ಮತ್ತು ಮಳೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರವೊಂದು ರಸ್ತೆಗೆ ಬಿದ್ದು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾದ ಘಟನೆ ಜು.7ರಂದು ನಡೆದಿದೆ.

ಕೊಡಾಜೆ ಸಮೀಪದ ಪಟ್ಲಕೋಡಿ ಎಂಬಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರಸ್ತೆಯ ಮಧ್ಯಕ್ಕೆ ಬಿದ್ದ ಮರದಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಶೀಘ್ರ ಕಾರ್ಯ ಪ್ರವೃತ್ತರಾದ ಸ್ಥಳೀಯರು ಮತ್ತು ಮೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮರ ಬಿದ್ದ ಪರಿಣಾಮ ಹೆದ್ದಾರಿಯ ಎರಡೂ ಕಡೆಗಳಲ್ಲಿ ವಾಹನಗಳ ಸುದೀರ್ಘ ಸಾಲು ಕಂಡುಬಂದಿತ್ತು. ಘಟನೆಯಿಂದಾಗಿ ಸುಮಾರು 7 ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆಯಲ್ಲಿ ಬದಿಯಲ್ಲಿರುವ ಕೆಲವು ಅಪಾಯಕಾರಿ ಮರಗಳನ್ನು ಈ ವೇಳೆ ತೆರವುಗೊಳಿಸಲಾಯಿತು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here