ಬಂಟ್ವಾಳ ತಾಲೂಕಿನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ಚಾಲನೆ

0

ವಿಟ್ಲ: ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನಲ್ಲಿ ಜೂ.30ರಂದು ಪ್ರಾರಂಭಿಸಲಾಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130ರಲ್ಲಿಯ ಬಿ.ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯ ಇರುವ ಮಾಜಿ‌ಕೇಂದ್ರ ಸಚಿವರಾಗಿರುವ ಬಿ.ಜನಾರ್ಧನ ಪೂಜಾರಿರವರ ನಿವಾಸದಲ್ಲಿ ಮೊದಲನೇ ಎನಿಮೇಷನ್ ಫಾರ್ಮ್ ಅನ್ನು ವಿತರಿಸಲಾಯಿತು. ಈ ಸಮೀಕ್ಷೆ ಯ ಬಗ್ಗೆ ಜನಾರ್ದನ ಪೂಜಾರಿಯವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಮಯದಲ್ಲಿ ಬಂಟ್ವಾಳ ತಹಶೀಲ್ದಾರರಾದ ಮಂಜುನಾಥ, ಚುನಾವಣೆ ಶಾಖೆಯ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ ಎಲ್ ಎ ಸುನೀಲ್ ಕುಮಾರ್ ಭಂಡಾರಿಬೆಟ್ಟು , ಮೇಲ್ವಿಚಾರಕರಾದ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮತಗಟ್ಟೆ ಅಧಿಕಾರಿಯವರಾದ ದಾಮೋದರ ಪಡಿಯಾರ್ , ಕಚೇರಿ ಸಿಬ್ಬಂದಿಯವರಾದ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here