ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಗರಿಗಳ ಭಾನುವಾರ ಆಚರಣೆ

0

ಬಂಟ್ವಾಳ: ಇಲ್ಲಿನ ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಗರಿಗಳ ಭಾನುವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಮೈದಾನದಲ್ಲಿ ಆರಂಭಗೊಂಡ ಪ್ರಾರ್ಥನಾ ವಿಧಿ ಹಾಗೂ ಮೆರವಣಿಗೆಯಲ್ಲಿ ಗರಿಗಳೊಂದಿಗೆ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ ಪಾಲ್ಗೊಂಡರು.

ಪ್ರಧಾನ ಧರ್ಮಗುರುಗಳಾಗಿ ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ನೂರಾರು ಭಕ್ತಾದಿಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಅರ್ಪಿಸಿದರು. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ವಂ. ಜೇಸನ್ ಮೊನಿಸ್ ಪ್ರವಚನ ನೀಡಿದರು. ತಪಸ್ಸು ಕಾಲದಲ್ಲಿ ಆತ್ಮ ನವೀಕರಣಗೊಳಿಸಲು 3 ದಿನಗಳ ದ್ಯಾನಕೂಟವನ್ನು ಆಯೋಜಿಸಲಾಗಿತ್ತು. ಸಮಾರಂಭದ ಮೇಲುಸ್ತುವಾರಿಯನ್ನು ಚರ್ಚ್ ಪಾಲನ ಮಂಡಳಿ ವಹಿಸಿತ್ತು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here