ನಂದನಹಿತ್ಲು ಶ್ರೀ ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದ ವರ್ಷಾವಧಿ ಉತ್ಸವದ ಕೋಳಿಕುಂಟ

0

ಬಂಟ್ಚಾಳ: ಇಲ್ಲಿಯ ನಗರದ ನಂದನಹಿತ್ಲು  ಶ್ರೀ ವೈದ್ಯನಾಥ,ಅರಸು, ಜುಮಾದಿ ಬಂಟ ದೈವಸ್ಥಾನದ ವರ್ಷಾವಧಿ ಉತ್ಸವವು ಎ.1 ರಿಂದ 3ರವರೆಗೆ ನಡೆಯಲಿರುವ ಪ್ರಯುಕ್ತ ಕೋಳಿಕುಂಟ ಮಂಗಳವಾರ ನಡೆಯಿತು.


ಈ ಸಂದರ್ಭ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕ್ಷೇತ್ರದ ಮನೆತನದವರಾದ ವಿಶ್ವನಾಥ ಪೊಣ್ಣಂಗಿಲಗುತ್ತು, ಲೋಕೇಶ್ ಬಂಗೇರಗಾಣದಪಡ್ಪು, ಲೋಕನಾಥ ಬಡಕೊಟ್ಟು, ಸಂಜೀವ ಪೆಲತ್ತಿಮಾರು ಹಾಗೂ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಕ್ಷೇತ್ರದಲ್ಲಿ ಪುನರ್ ಕಲಶಾಭಿಷೇಕ ಪ್ರಯುಕ್ತ ಮಾ.30ರಂದು ಸಂಜೆ ವೈಧಿಕ ವಿಧಿ-ವಿಧಾನಗಳು ನಡೆಯಲಿದೆ. ಮಾ.31ರಂದು ಕಲಶಾಭಿಷೇಕ, ನಾಗತಂಬಿಲ ಸೇವೆ ಬಳಿಕ ಹಿಂದು ಯುವ ಸೇನೆ ಬಂಟ್ವಾಳ ತಾಲೂಕು ಹಾಗೂ ಕ್ಷೇತ್ರದ ಅಡಳಿತ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ದ್ವಾರದ ಉದ್ಘಾಟನೆ ನಡೆಯಲಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here