ನದಿಯಲ್ಲಿ ತೇಲಿ ಬಂತು ಆಧಾರ್ ಕಾರ್ಡ್

0

ಬಂಟ್ವಾಳ: ಫರಂಗಿಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಪುದು ಗ್ರಾಮಕ್ಕೆ ಸಂಬಂಧಪಟ್ಟ ನೂರಾರು ಆಧಾರ್‌ಕಾರ್ಡ್‌ಗಳು ಮಾ.4ರಂದು ಪತ್ತೆಯಾಗಿದೆ.

ಸ್ಥಳೀಯರು ಪಂಚಾಯತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಗಮನಕ್ಕೆ ತಂದಿದ್ದು, ಸ್ಥಳೀಯರೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಕಂತೆ ಕಂತೆಯಾಗಿ ನೂರಾರು ಆಧಾರ್‌ಕಾರ್ಡ್‌ಗಳು ನದಿಯಲ್ಲಿ ತೇಲುತ್ತಿದ್ದವು. ನದಿಗೆ ಯಾರು ತಂದು ಹಾಕಿದ್ದಾರೆ? ಯಾಕೆ ಹಾಕಿದ್ದಾರೆ? ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಮಾ. 3ರಂದು ಸಂಜೆ ನದಿಯಲ್ಲಿ ಕಿನಾರೆ ಭಾಗದಲ್ಲಿ ನೀರಿನಲ್ಲಿ ರಾಶಿ ರಾಶಿ ಆಧಾರ್‌ಕಾರ್ಡ್‌ಗಳು ತೇಲುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದು, ಅವರು ಗ್ರಾ.ಪಂ.ಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾ.ಪಂ. ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅದು ಗ್ರಾಮಸ್ಥರದ್ದೇ ಆಧಾರ್‌ಕಾರ್ಡ್‌ ಆಗಿದ್ದು, ನದಿಗೆ ಹೇಗೆ ಹೋಯಿತು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾರು ತಂದು ಹಾಕಿದ್ದಾರೆ? ಯಾಕೆ ಹಾಕಿದ್ದಾರೆ? ಎನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಈ ಕುರಿತು ಗ್ರಾ. ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಆಧಾರ್‌ಕಾರ್ಡ್‌ಗಳಲ್ಲಿ ಹಲವು ಬದಲಾವಣೆಗಳ ಕಾರಣಕ್ಕೆ ಗ್ರಾಮಸ್ಥರು ಅರ್ಜಿ ಹಾಕಿ ಅಂಚೆಯ ಮೂಲಕ ಕಾರ್ಡ್‌ ಬರುತ್ತದೆ ಎಂದು ಕಾದು ಕಾದು ಬಳಿಕ ಸೈಬರ್‌ಗಳಲ್ಲಿ ಪ್ರತಿಗಳನ್ನು ತೆಗೆಯುತ್ತಿದ್ದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತನಿಖೆಗೆ ಖಾದರ್ ಸೂಚನೆ
ನದಿಯಲ್ಲಿ ಆಧಾ‌ರ್ ಕಾರ್ಡ್ ಪತ್ತೆಯಾಗಲು ಕಾರಣ ಏನು? ಅದಕ್ಕೆ ಕಾರಣರಾದವರು ಯಾರು ಎಂಬುದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here