ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚ್ನಲ್ಲಿ ವಾರ್ಷಿಕ ಕ್ಯಾಟೆಕಿಸಮ್ ದಿನವನ್ನು ಆಚರಿಸಲಾಯಿತು.

ಚರ್ಚ್ ಧರ್ಮ ಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಮುಖ್ಯೋಪಾಧ್ಯಾಯರಾದ ಜೇಸನ್ ಮೊನಿಸ್, ಸೂಪೀರಿಯರ್ ಇಡೊಲಿನ್ ರೊಡ್ರಿಗಸ್, ಪಿಪಿಸಿ ಉಪಾಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಆಲ್ವಿನ್ ಪಿಂಟೋ, ಸಂಯೋಜಕ ಸಚಿನ್ ನೋರೊನ್ಹಾ ಹಾಗೂ ಬೈಬಲ್ ಮತ್ತು ಕ್ಯಾಟೆಕಿಸಮ್ ಆಯೋಗದ ಸಂಯೋಜಕಿ ಲವೀನಾ ಡಿಸೋಜಾ ಉಪಸ್ಥಿತರಿದ್ದರು.

ಕ್ಯಾಟೆಕಿಸಮ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೂರ್ಣ ಹಾಜರಾತಿ ಹೊಂದಿದವರಿಗೆ ಬಹುಮಾನ ವಿತರಿಸಲಾಯಿತು. ಧರ್ಮಗುರುಗಳು ಕ್ಯಾಟೆಕಿಸಮ್ ಶಿಕ್ಷಕರನ್ನು ಸನ್ಮಾನಿಸಿದರು. ಶಾಲಾ ಮುಖ್ಯೋಪಾಧ್ಯಯರಾದ ವಂ. ಜೇಸನ್ ಮೋನೀಸ್ ಸಂದೇಶ ನೀಡಿ ಮಕ್ಕಳಲ್ಲಿ ದೇವರ ವಾಕ್ಯದ ಗೌರವ, ನಂಬಿಕೆ ಮೌಲ್ಯಾದರಿತ ಗುಣಗಳನ್ನು ಬೆಳೆಸುವಲ್ಲಿ ಪೋಷಕರ ಒಆತ್ರವನ್ನು ತಿಳಿಸಿದರು. ವಂದನೀಯ ಫ್ರಾನ್ಸಿಸ್ ತಮ್ಮ ಸಂದೇಶದಲ್ಲಿ, ಮಕ್ಕಳಿಗೆ ದೇವರ ಪ್ರೀತಿಯನ್ನು ತಮ್ಮ ಜೀವನದಲ್ಲಿ ಮೊದಲ ಸ್ಥಾನದಲ್ಲಿ ಇರಿಸಿಕೊಳ್ಳಲು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಹಾಗೂ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಲವೀನಾ ಡಿಸೋಜಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆಶೆಲ್ ಡಿಸೋಜ ಮತ್ತು ಪ್ರವೀಣ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ವೀಡಲ್ ಕ್ರಾಸ್ತಾ ಮತ್ತು ಪ್ರಿನೀತ್ ಪಿಂಟೋ ನಿರೂಪಿಸಿದರು. ಮೇರಿ ಪಿಂಟೋ ವಂದಿಸಿದರು.








