ಬಂಟ್ವಾಳ : ಕಾವಳಪಡೂರು ಗ್ರಾಮದ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ಬಿ.ಸಿ.ರೋಡ್ ಪುಂಜಾಲಕಟ್ಟೆ ಹೆದ್ದಾರಿಯ ವಗ್ಗದಲ್ಲಿ ಈ ಹಿಂದೆ ಇದ್ದ ಬಸ್ಸು ನಿಲ್ದಾಣವನ್ನು ರಸ್ತೆ ಅಗಲಿಕರಣ ಸಮಯದಲ್ಲಿ ಕೆಡವಿ ಹಾಕಲಾಯಿತು. ತದ ನಂತರ ವರ್ಷ ಎರಡು ಕಳೆದರೂ ಈ ಭಾಗದಲ್ಲಿ ಬಸ್ಸು ನಿಲ್ದಾಣ ಇಲ್ಲದೆ ಜನರು ಪರದಾಡುವುದನ್ನು ಕಂಡು ಹಲವು ಸಲ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಕೂಡ ಏನು ಪ್ರಯೋಜನವಾಗುತ್ತಿರಲಿಲ್ಲ.
ಆದರೆ ಈ ಸ್ಥಳದಲ್ಲಿ ದಿನಕ್ಕೊಂದರಂತೆ ಅನಧಿಕೃತ ಅಂಗಡಿಗಳು ಮಾತ್ರ ತೆರೆಯುತ್ತಿದ್ದವು ಆದರೆ ಬಸ್ಸು ನಿಲ್ದಾಣದ ಬಗ್ಗೆ ಗ್ರಾಮ ಪಂಚಾಯತ್ ಗಮನ ಹರಿಸದೆ ಇರುವುದು ತುಂಬಾ ವಿಪರ್‍ಯಾಸ ಇದನ್ನು ಮನಗಂಡ ಕಾರಿಂಜ ಹಿಂದೂ ಜಾಗರಣ ವೆದಿಕೆಯ ಕಾರ್ಯಕರ್ತರು ಹಾಗೂ ಊರಿನ ಜನರ ನೆರವಿನಿಂದ ಸುಂದರವಾದ ಬಸ್ಸು ನಿಲ್ದಾಣವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ವ್ಯವಸ್ಥೆಯನ್ನು ಮಾಡಿಕೊಟ್ಟದ್ದಕ್ಕೆ ಈ
ಭಾಗದ ನಾಗರೀಕರು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿದರು.