ಬಂಟ್ವಾಳ : ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ (ರಿ.) ಅಲ್ಲಿಪಾದೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆ. 31ರಿಂದ ಸೆ. 1ರವರೆಗೆ ಜರಗಲಿದೆ.
ಆ. 31ರಂದು ಬೆಳಗ್ಗೆ 9 ಗಂಟೆಗೆ ಗಣಹೋಮ, ವಿಗ್ರಹ ಪ್ರತಿಷ್ಠೆ, ಆಟೋಟ ಸ್ಪರ್ಧೆಗಳು, ಬೆಳಗ್ಗೆ 12 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, 6.30ರಿಂದ ಭಜನೆ, ಸಾಯಂಕಾಲ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಸೆ. 1 ರಂದು ಬೆಳಗ್ಗೆ 9 ಗಂಟೆಗೆ ಗಣಹೋಮ, ಆಟೋಟ ಸ್ಪರ್ಧೆಗಳು, ಬೆಳಗ್ಗೆ 10.30ರಿಂದ ಭಜನೆ ಮಧ್ಯಾಹ್ನ 12 ರಿಂದ ಧಾರ್ಮಿಕ ಸಭೆ ಬಹುಮಾನ ವಿತರಣೆ, ಮಧ್ಯಾಹ್ನ 3 ರಿಂದ ಮೆರವಣಿಗೆ ಜರಗಲಿದೆ ಎಂದು ಸಮಿತಿ ಅಧ್ಯಕ್ಷ ಚಂದ್ರಹಾಸ ನೂರ‍್ತಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.